ಕುಂಬಳೆ : ಬಂದ್ಯೋಡು ಸಮೀಪದ ಅಡ್ಕದಿಂದ ನಿಲ್ಲಿಸಿದ್ದಲ್ಲಿಂದ ಕಳವುಗೈಯಲ್ಪಟ್ಟ ಮೀನು ಸಾಗಾಟದ ಮಿನಿಲಾರಿ ಬದಿಯಡ್ಕದಿಂದ ವಶಪಡಿಸಲಾಗಿದೆ. ಈ ಬಗ್ಗೆ ಬದಿಯಡ್ಕದ ಇಬ್ಬರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಸೋಮವಾರ ಬೆಳಿಗ್ಗೆ ಸುಮಾರು ಆರು ವಾಹನಗಳು ನಿಲ್ಲಿಸಿದ್ದ ಪಾರ್ಕಿಂಗ್ ಸ್ಥಳದಿಂದ ಸಿಯಾನ್ ಎಂಬ ಹೆಸರಿನ ಲಾರಿಯನ್ನು ಕಳವುಗೈಯಲಾಗಿದ್ದು ಈ ಬಗ್ಗೆ ಕುಂಬಳೆ ಪೋಲಿಸರಿಗೆ ದೂರು ನೀಡಲಾಗಿತ್ತು. ಇದರಂತೆ ನಡೆದ ತನಿಖೆಯಲ್ಲಿ ಪೋಲಿಸರು ಬದಿಯಡ್ಕ ದಿಂದ ಪತ್ತೆ ಹಚ್ಚಿದರು.

0 Comments