Ticker

6/recent/ticker-posts

Ad Code

ಬಾಡೂರಿನಲ್ಲಿ 3.78 ಲೀಟರ್ ವಿದೇಶಿ ಮದ್ಯ ಸಹಿತ ಯುವಕನ‌ ಬಂಧನ


ಕುಂಬಳೆ : ಮನೆ ಸಮೀಪ ಮಾರಾಟಕ್ಕೆಂದು ಸಂಗ್ರಹಿಸಿಟ್ಟಿದ್ದ 3.78 ಲೀಟರ್ ಭಾರತೀಯ ನಿರ್ಮಿತ ವಿದೇಶಿ ಮದ್ಯ ಸಹಿತ ಯುವಕನೋರ್ವನನ್ನು ಕುಂಬಳೆ  ಅಬಕಾರಿ ರೇಂಜ್ ಇನ್ಸ್‌ಪೆಕ್ಟರ್ ಶ್ರವಣ್ ಕೆ.ವಿ ಮತ್ತು ಅವರ ತಂಡವು ಬಂಧಿಸಿದೆ. ಬಾಡೂರಿನ  ಸೀತಾರಾಮ ರೈ ಬಂಧಿತ ಆರೋಪಿ. ಅಕ್ರಮ ಮದ್ಯ ಸಹಿತ  ಆರೋಪಿಯನ್ನು  ಕುಂಬಳೆ ಅಬಕಾರಿ ರೇಂಜ್ ಆಫೀಸ್‌ನಲ್ಲಿ ಹಾಜರುಪಡಿಸಲಾಯಿತು. ಸಹಾಯಕ ಅಬಕಾರಿ ಇನ್ಸ್‌ಪೆಕ್ಟರ್ (ಗ್ರೇಡ್) ಪೀತಾಂಬರನ್ ಕೆ,  ಅಬಕಾರಿ ಅಧಿಕಾರಿಗಳಾದ ಅಖಿಲೇಶ್ ಎಂ.ಎಂ, ಜಿತಿನ್ ವಿ ಮತ್ತು ಚಾಲಕ ಪ್ರವೀಣ್ ಕುಮಾರ್ ಈ ಕಾರ್ಯಾಚರಣೆಯಲ್ಲಿ ಭಾಗಿಗಳಾಗಿದ್ದರು.

Post a Comment

0 Comments