Ticker

6/recent/ticker-posts

Ad Code

ನಿನ್ನ‌ ದಿನವೆಣಿಸಿಕೋ..ಹಿಂದೂ ಐಕ್ಯವೇದಿ ಕಾರ್ಯಕರ್ತನಿಗೆ ಅಜ್ಞಾತ ಕರೆ

 


ಕುಂಬಳೆ :  ಚುನಾವಣೆ ಸಮೀಪಿಸುತ್ತಿದ್ದಂತೆ ಅನ್ಯಮತೀಯ ದಾಳಿ ವ್ಯಾಪಕವಾಗುತ್ತಿದ್ದು ಪೋಲಿಸ್ ಇಲಾಖಾಧಿಕೃತರು ಆಡಳಿತರೂಢ ಪಕ್ಷಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದಾಗಿ ವ್ಯಾಪಕ ದೂರುಗಳು ಕೇಳಿ ಬರುತ್ತಿದೆ. ಈ ನಡುವೆ ಹಿಂದೂ ಕಾರ್ಯಕರ್ತರ ವಿರುದ್ಧ ಸುಳ್ಳು ದಾಖಲೆಯ ದೂರು ದಾಖಲಾಗಿದ್ದು ಇದನ್ನು ಪ್ರಶ್ನಿಸಿದವರ ವಿರುದ್ಧ ಗೂಢಲೋಚನೆಯ ತಂತ್ರ ಪ್ರಯೋಗವಾಗುತ್ತಿರುವುದಾಗಿ ದೂರುಗಳಿವೆ. ಇದೀಗ ಹಿಂದೂ ಐಕ್ಯವೇದಿ ಕಾರ್ಯಕ್ರಮ ಸಂಘಟಿಸಲ್ಪಟ್ಟ ಯುವ ಕಾರ್ಯಕರ್ತನೋರ್ವನ ವಿರುದ್ಧ ಕೊಲೆ ಬೆದರಿಕೆಯ ಕರೆಗಳು ಬಂದಿರುವುದಾಗಿ ದೂರಲಾಗಿದೆ.

ಬಂದ್ಯೋಡು ಅಡ್ಕ ವೀರನಗರ ನಿವಾಸಿ ಹಾಗೂ ಹಿಂದೂ ಐಕ್ಯವೇದಿ ಮಂಜೇಶ್ವರ ತಾಲೂಕು ಘಟಕ ಸದಸ್ಯ ವೀರನಗರದ ಗಿರಿ ಯಾನೆ ಗಿರಿಧರ ಎಂಬವರಿಗೆ ಮಾ. 15ರಂದು ರಾತ್ರಿ ಕೊಲೆ ಬೆದರಿಕೆ ಕರೆ ಬಂದಿದೆ. ಹಿಂದೂ ಕಾರ್ಯಕರ್ತನಾದ ನಿನ್ನ ದಿನಗಳು ಎಣಿಸಲ್ಪಟ್ಟಿರುವುದಾಗಿ ಅಜ್ಞಾತ ವ್ಯಕ್ತಿ ಬೇದರಿಕೆ ಒಡ್ಡಿದ್ದಾನೆಂದು ಕರೆ ಬಂದ ಫೋನ್ ನಂಬ್ರ ಸಹಿತ ಕುಂಬಳೆ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೖಗೆತ್ತಿಕೊಂಡಿದ್ದಾರೆ. ಮಾ. 15ರಂದು ಕುಂಬಳೆಯಲ್ಲಿ ನಡೆದ ಹಿಂದೂ ಐಕ್ಯ ವೇದಿಕೆ ಕಾರ್ಯಕ್ರಮದ ದಿವಸ ರಾತ್ರಿ 8.30ರ ವೇಳೆಗೆ ಬೆದರಿಕೆ ಕರೆ ಬಂದಿದ್ದು, ಕುಟುಂಬ ಸಮೇತ ಬದುಕುವ ತನಗೆ ಜೀವಭಯ ಇದೆಯೆಂದು ಗಿರಿಧರ್ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.ಈ ಬಗ್ಗೆ ಇಂಟಲಿಜೆನ್ಸ್ ಫೋಲ್ ತನಿಖೆ ಆರಂಭಿಸಿದ್ದು ಶೀಘ್ರದಲ್ಲಿಯೇ ಆರೋಪಿಯನ್ನು ಬಂಧಿಸುವ ಸುಳಿವು ಲಭಿಸಿದೆ.

Post a Comment

0 Comments