Ticker

6/recent/ticker-posts

Ad Code

26,000 ಮೆಟ್ರಿಕ್ ಟನ್ ಅಡುಗೆ ಅನಿಲದೊಂದಿಗೆ ಮಂಗಳೂರು ತಲುಪಿದ ಶಿವಾಲಿಕ್ ಎಲ್‌ಪಿಜಿ ಹಡಗು

 

ಮಂಗಳೂರು : ಮಧ್ಯಪ್ರಾಚ್ಯದಲ್ಲಿನ ಯುದ್ಧ ಭೀಕರತೆಯ ನಡುವೆ ಹಾರ್ಮುಜ್ ಜಲಸಂಧಿಯ ಮೂಲಕ ಆಗಮಿಸಿದ ಶಿವಾಲಿಕ್ ಎಲ್‌ಪಿಜಿ ಹಡಗು ನವ ಮಂಗಳೂರು  ಬಂದರಿಗೆ ತಲುಪಿದೆ. ಮಾರ್ಚ್ ಮೊದಲ ವಾರದಲ್ಲಿ ಕತಾರ್‌ನ ರಜಾ ಲಫನ್ ಬಂದರಿನಿಂದ ಹಡಗು ಪ್ರಯಾಣ ಬೆಳೆಸಿದ್ದು 46,000 ಮೆಟ್ರಿಕ್ ಟನ್ ಅಡುಗೆ ಅನಿಲದೊಂದಿಗೆ ಶಿವಾಲಿಕ್ ಪ್ರಯಾಣ ಆರಂಭಗೊಂಡಿತ್ತು. ಅದು ಮೊದಲು ಗುಜರಾತ್‌ಗೆ ಬಂದಿತು.  ಲ್ಲಿ 20,000 ಮೆಟ್ರಿಕ್ ಟನ್ ಅಡುಗೆ ಅನಿಲವನ್ನು ಇಳಿಸಿದ ನಂತರ ಮಂಗಳೂರನ್ನು ತಲುಪಿತು. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಆರ್ಡರ್ ಮಾಡಿದ ದ್ರವ ಎಲ್‌ಪಿಜಿಯೊಂದಿಗೆ ಹಡಗು ಬಂದಿದೆ.   ಇದರೊಂದಿಗೆ ರಾಜ್ಯದ  ಪ್ರಮುಖ ಅಡುಗೆ ಅನಿಲ ಬಿಕ್ಕಟ್ಟು ಬಗೆಹರಿಯಬಹುದೆನ್ನುವ ನಿರೀಕ್ಷೆಯಿದೆ.

Post a Comment

0 Comments