Ticker

6/recent/ticker-posts

Ad Code

ಮನೆಯ ಮಹಡಿಯಿಂದ ಬಿದ್ದು ಯುವತಿ ಸಾವು

 

ಕಣ್ಣೂರು: ಮನೆಯ ಮಹಡಿಯಿಂದ ಬಿದ್ದು ಯುವತಿಯೋರ್ವೆ ಸಾವನ್ನಪ್ಪಿದ್ದಾರೆ. ಕೂತುಪರಂಬ ಸಿಖ್ ಕಾಲೇಜಿನ ಉದ್ಯೋಗಿಯಾಗಿದ್ದ  ಸಜಿಮಾ (42)  ಪ್ಯಾರಲ್ ನ ತಮ್ಮ ಮನೆಯಲ್ಲಿ ಮೃತಪಟ್ಟಿದ್ದಾರೆ. ಮಂಗಳವಾರ ರಾತ್ರಿ  ಈ ಘಟನೆ ನಡೆದಿದ್ದು, ಮನೆಯ  ಮಹಡಿಗೆ  ಹತ್ತುವಾಗ  ಬಿದ್ದರು ಎಂದು ಹೇಳಲಾಗಿದೆ. ಅವರನ್ನು ತಕ್ಷಣ ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ  ಜೀವ ಉಳಿಸಲಾಗಲಿಲ್ಲ. ಮೃತರು  ಸಿಪಿಎಂ ಪ್ಯಾರಲ್ ಶಾಖೆಯ ಕಾರ್ಯದರ್ಶಿ ಮತ್ತು ಎಲೆಕ್ಟ್ರಿಷಿಯನ್ ಎಂ.ಕೆ. ಪವಿತ್ರನ್ ಅವರ ಪತ್ನಿಯಗಿದ್ದಾರೆ. ತಂದೆ ಗಂಗಾಧರನ್, ತಾಯಿ ಶಕುಂತಲಾ, ಮಕ್ಕಳಾದ  ಸಜಿತ್ರನ್, ವಿಮಲಜ್ಯೋತಿ,  ಶ್ರೀಯುಕ್ತ, ಸಹೋದರ  ಸಜೀಶ್, ಸಹೋದರಿ ಸಜಿನಾ ಎಂಬಿವರನ್ನಗಲಿದ್ದಾರೆ.

Post a Comment

0 Comments