Ticker

6/recent/ticker-posts

Ad Code

ಮೊಬೈಲ್ ಫೋನ್ ರೀಪೇರಿ ಮಾಡದ ಹತಾಶೆಯಿಂದ ಕಳತ್ತೂರಿನಲ್ಲಿ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ

ಕುಂಬಳೆ : ಮೊಬೈಲ್ ಫೋನ್ ಡಿಸ್ಪ್ಲೇ ರಿಪೇರಿ ಮಾಡಿ ಕೊಟ್ಟಿಲ್ಲವೆಂಬ ಮನೋ ವೈಷಮ್ಯದಿಂದ  17ರ ಹುಡುಗಿ ಇಲಿ ವಿಷ ಸೇವಿಸಿ ಆತ್ಮಹತ್ಯಗೈದ ದಾರುಣ ಘಟನೆ ಕಳತ್ತೂರಿನಲ್ಲಿ ನಡೆದಿದೆ. ಕಳತ್ತೂರು ಕಿದೂರಿನ ಲಕ್ಷ್ಮೀ ನಿಲಯದ ದಾಮೋದರ ಎಂಬವರ ಮಗಳು ಎಂ. ಡಿ. ಪೂಜಾ (17) ಆತ್ಮಹತ್ಯೆ ನಡೆಸಿದ ಯುವತಿ. ಈಕೆ ಮಂಗಳೂರಿನ ಪಿಯುಸಿ ವಿದ್ಯಾರ್ಥಿನಿಯಾಗಿದ್ದಾಳೆ. ಇತ್ತೀಚೆಗೆ ಹಳದಿ ಕಾಮಾಲೆ ಬಾಧಿಸಿ ದೀರ್ಘಕಾಲ ಚಿಕಿತ್ಸೆಯಲ್ಲಿದ್ದ ಕಾರಣ ಈಕೆಯ ಶಿಕ್ಷಣ ಮೊಟಕುಗೊಂಡಿತ್ತು. ಮುಂದಿನ ಅಧ್ಯಯನ ವರ್ಷದಿಂದ ಮೊಟಕುಗೊಂಡ ಶಿಕ್ಷಣ ಪುನರಾರಂಭಿಸುವ ಸಿದ್ಧತೆಯಲ್ಲಿದ್ದಳು. ಕೆಲದಿನಗಳಿಂದ ಈಕೆಯ ಮೊಬೈಲ್ ಫೋನ್ ಡಿಸ್ಪ್ಲೇ ಹಾಳಾಗಿತ್ತು. ಅದನ್ನು ಆಕೆಯ ಬೇಡಿಕೆಯಂತೆ ರಿಪೇರಿ ಮಾಡಿ ಒದಗಿಸಲು ಆರ್ಥಿಕ ತಾಪತ್ರಯ ಕಾರಣದಿಂದ ಮನೆಯವರಿಗೆ ಸಾಧ್ಯವಾಗಿರಲಿಲ್ಲ. ತನ್ನ ಮೊಬೈಲ್ ರಿಪೇರಿ ಮಾಡಿ ಒದಗಿಸದೇ ಇದ್ದರೆ ತಾನು ಇಲಿ ವಿಷ ಸೇವಿಸಿ ಆತ್ಮಹತ್ಯೆ ನಡೆಸುವುದಾಗಿ ಪೂಜಾ ಈ ಹಿಂದೆ ಕೆಲವು ಬಾರಿ ಮನೆಯವರಿಗೆ ಬೆದರಿಕೆ ಒಡ್ಡಿದ್ದಳು. ಇದರಂತೆ ನಿನ್ನೆ ಸಂಜೆ ಆಕೆ ಮೊಬೖಲ್ ವಿಚಾರದಲ್ಲಿ ಜಗಳಾಡಿ ತಾನು ಇಲಿ ವಿಷ ಸೇವಿಸಿರುವುದಾಗಿ ಹೇಳಿದ್ದಳು. ಆದರೆ ಈ ಹಿಂದೆಯೂ ಇದೇ ರೀತಿಯಲ್ಲಿ  ಬೆದರಿಕೆ ಹಾಕಿದ್ದರಿಂದ ಮನೆಯವರಿದನ್ನು ಗಃಭೀರವಾಗಿ ಪರಿಗಣಿಸಿರಲಿಲ್ಲ. ರಾತ್ರಿ ವೇಳೆ ಪೂಜಾಳ ಪರಿಸ್ಥಿತಿ ಗಂಭೀರವಾದಾಗ ಆತಂಕಗೊಂಡು ದೇರಳಕಟ್ಟೆ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಗುರುವಾರ ಸಂಜೆ ಆಕೆ ಮೃತಪಟ್ಟಳು. ಮೃತಳು ತಾಯಿ ಗಿರಿಜ, ಸಹೋದರ ಮನಿತ್ ನನ್ನು ಅಗಲಿದ್ದಾರೆ.

Post a Comment

0 Comments