ಕುಂಬಳೆ : ಅನಂತಪುರದ ರಾಜಾರಾಮ್ ಎಂಬವರ ಮನೆಯಲ್ಲಿ ಉಂಟಾದ ಕರೆಂಟ್ ಶಾರ್ಟ್ ಸರ್ಕ್ಯೂಟ್ ನಿಂದ ಟಿವಿ ಹಾಗೂ ಗೃಹೋಪಕರಣ ವಸ್ತುಗಳು ನಾಶಗೊಂಡಿದೆ. ದೈಹಿಕವಾಗಿ ಅಶಕ್ತರಾಗಿರುವ ರಾಜಾರಾಮ್ ಅವರಿಗೆ ಮನೆಯ ನಡು ಕೋಣೆಯಿಂದ ಬೆಂಕಿ ಮತ್ತು ಹೊಗೆ ಏರುತ್ತಿರುವುದನ್ನು ನೋಡಿ ತನ್ನ ನೆರೆಹೊರೆಯವರಿಗೆ ಫೋನ್ ಮೂಲಕ ಮಾಹಿತಿ ನೀಡಿದರು. ಮನೆಯಲ್ಲಿ ರಾಜಾರಾಮ್ ಒಬ್ಬರೇ ಇದ್ದರು. ನೆರೆಯ ಪ್ರಕಾಶ್ ಎಂಬವರು ರಾಜಾರಾಮ ಅವರನ್ನು ಸುರಕ್ಷಿತವಾಗಿ ಹೊರಗೆ ಕರೆತಂದು ಬಳಿಕ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದರು. ಅಗ್ನಿಶಾಮಕ ಮತ್ತು ರಕ್ಷಣಾ ಅಧಿಕಾರಿ ವಿ ಎಂ ಸತೀಶನ್ ನೇತೃತ್ವದ ಕಾಸರಗೋಡು ಅಗ್ನಿಶಾಮಕ ಮತ್ತು ರಕ್ಷಣಾ ಠಾಣೆಯ 2 ಘಟಕಗಳು ಆಗಮಿಸಿ ಬೆಂಕಿಯನ್ನು ನಂದಿಸಿದವು. ಗ್ರೇಡ್ ಅಸಿಸ್ಟೆಂಟ್ ಸ್ಟೇಷನ್ ಆಫೀಸರ್ ಎಂ ಕೆ ಸೂರಜ್ ಅಗ್ನಿಶಾಮಕ ಮತ್ತು ರಕ್ಷಣಾ ಅಧಿಕಾರಿ ಉಮೇಶನ್ನ್, ಅಜೇಶ್, ಅಭಿಲಾಷ್, ಅರುಣ್‌ಕುಮಾರ್, ಸಿರಾಜುದ್ದೀನ್, ಅತುಲ್ ರವಿ, ಶ್ರೀಜಿಶಾ, ಅರುಣಾ ಮತ್ತು ಗೃಹರಕ್ಷಕ ದಳದ ರಾಜು ಉನ್ನಿಕೃಷ್ಣನ್ ತಂಡದಲ್ಲಿದ್ದರು. ಮನೆಯೊಳಗಿದ್ದ ಟಿವಿ ಮತ್ತು ಟಿವಿ ಸ್ಟ್ಯಾಂಡ್ ಶಾರ್ಟ್ ಸರ್ಕ್ಯೂಟ್ ನಿಂದ ಸಂಪೂರ್ಣವಾಗಿ ಸುಟ್ಟುಹೋಗಿವೆ.

0 Comments