Ticker

6/recent/ticker-posts

Ad Code

ಕುಂಬ್ಡಾಜೆ ನಡುವಂಗಡಿ ಬಸ್ ನಿಲ್ದಾಣದ ಬಳಿ ಜೂಜಾಟ : ಮೂವರ ಬಂಧನ

 

ಬದಿಯಡ್ಕ : ಕುಂಬ್ಡಾಜೆಯ  ನಡುವಂಗಡಿ ಬಸ್ ನಿಲ್ದಾಣದ ಬಳಿ ಜೂಜಾಟ ದಂಧೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಬದಿಯಡ್ಕ ಎಸ್‌ಐ ರೂಪೇಶ್ ನೇತೃತ್ವದಲ್ಲಿ ದಾಳಿ ನಡೆಸಿ ಮೂವರನ್ನು ಬಂಧಿಸಲಾಗಿದೆ.

ಜೂಜಾಟ ದಂಧೆಗೆ ಬಳಸಿದ್ದ ರೂ 3370 ವಶಪಡಿಲಾಗಿದೆ. ಬನಾರಿಯ ಪೆರ್ಲದ ದಿನೇಶ್ ನಾಯಕ್ (40), ರಘು (43) ಮತ್ತು ಪೆರ್ಲದ ಪ್ರಕಾಶ್ ರಾವ್ (54) ಎಂಬವರು ಬಂಧಿತರು. ಇವರನ್ನು ಠಾಣೆಗೆ ಕರೆದೊಯ್ದು, ಪ್ರಕರಣ ದಾಖಲಿಸಿಕೊಂಡು ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Post a Comment

0 Comments