Ticker

6/recent/ticker-posts

Ad Code

ಚಾರಿತ್ರಿಕ ಅಂತರದ ಗೆಲುವು ದಾಖಲಿಸಿದ ಮಂಜೇಶ್ವರದ ಎಕೆಎಂ ಅಶ್ರಫ್


ಕುಂಬಳೆ : ಕಳೆದ ಮೂರು ಬಾರೀ ಅತೀ ಕಡಿಮೆ ಅಂತರದ ಮತದ ಗೆಲುವು ಕಂಡ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಯುಡಿಎಫ್ ನ ಎಕೆಎಂ ಅಶ್ರಫ್ 29,332 ಮತಗಳ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿರುವುದು ಯುಡಿಎಫ್ ಪಾಳಯದಲ್ಲಿ ಅದ್ವಿತೀಯ ಸಂಭ್ರಮಕ್ಕೆ ಕಾರಣವಾಗಿದೆ. ಇದು ಮಂಜೇಶ್ವರ ಮಂಡಲದ ಐತಿಹಾಸಿಕ ಮತ್ತು ಚಾರಿತ್ರಿಕ ಅಂತರದ ಗೆಲುವಾಗಿದೆ ಎಂದು ಪಕ್ಷದ ಬೆಂಬಲಿಗರು ಕೊಂಡಾಡುತ್ತಿದ್ದಾರೆ. 
ಈ ಹಿಂದೆ ಕೇವಲ ಮತಗಳ ಅಂತರದಲ್ಲಿ ಯುಡಿಎಫ್ ಗೆಲುವು ಕಂಡಿದ್ದ ಮಂಜೇಶ್ವರದಲ್ಲಿ ಪ್ರಬಲ ಪ್ರತಿಸ್ಪರ್ಧಿ ಬಿಜೆಪಿಯನ್ನು 30 ಸಾವಿರದಷ್ಟು ಮತಗಳ ಅಂತರದಲ್ಲಿ ಪರಾಜಯಗೊಳಿಸುವ ಮೂಲಕ ಕಾಸರಗೋಡು ಜಿಲ್ಲೆಯಲ್ಲಿ ಅತ್ಯಧಿಕ ಬಹುಮತ ಪಡೆದ ಸಾಧನೆ ಎಕೆಎಂ ಅವರದ್ದಾಗಿದೆ.

Post a Comment

0 Comments