Ticker

6/recent/ticker-posts

Ad Code

ಸೀತಾಂಗೋಳಿಯ ಕಟ್ಟಡವೊಂದರ ಹಿಂಭಾಗ ಕೊಲೆಗೀಡಾದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ ನಿಗೂಢ ಪ್ರಕರಣ ಬೇಧಿಸಲು ಹಲವರ ವಿಚಾರಣೆ

 


ಸೀತಾಂಗೋಳಿ: ಯುವಕನ ಮೃತದೇಹ ಸೀತಾಂಗೋಳಿಯ ಕಟ್ಟಡವೊ೦ದರ ಹಿಂಭಾಗದಲ್ಲಿ ನಿಗೂಢ ರೀತಿಯಲ್ಲಿ ಪತ್ತೆಯಾಗಿದೆ. ಕನ್ನೆಪ್ಪಾಡಿ ಬಳಿಯ ಬಾಪ್ಪಾಲಿಪ್ಪೋನಂ ಸಮೀಪದ ಪಾಡ್ಲಡ್ಕ ನಿವಾಸಿ ಸಫಾಯತ್ (30) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಇ೦ದು (ಮಂಗಳವಾರ) ಮಧ್ಯಾಹ್ನ ಸುಮಾರು 2 ಗಂಟೆಗೆ ಮೃತದೇಹ ಪತ್ತೆಯಾಗಿದೆ. ಸಫಾಯತ್ ನ ತಲೆಯ ಹಿಂಭಾಗದಲ್ಲಿ ಆಳವಾದ ಗಾಯಗಳು ಇವೆ. ಇದೊಂದು  ಕೊಲೆ ಎಂದು ಸಂಶಯಿಸಲಾಗಿದೆ.

ಸಫಾಯತ್ ಕೋಳಿ ಸಾಗಾಣಿಕೆ ವಾಹನದ ಚಾಲಕನಾಗಿ ಕೆಲಸ ಮಾಡುತ್ತಿದ್ದು ಯಾವುದೋ ತಂಡ ಈ ಕೃತ್ಯ ಎಸಗಿರುವುದಾಗಿ ಪೋಲಿಸರು ಸಂಶಯಿಸಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತದೇಹವನ್ನು ಕಂಡ ಸ್ಥಳೀಯರು ಕೂಡಲೇ ಕುಂಬಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಮೃತದೇಹದ ಸಮೀಪ ಕೊಲೆಗೆ ಬಳಸಲಾಗಿದೆ ಎನ್ನಲಾದ ಮಾರಕಾಸ್ತ್ರಗಳು ಪತ್ತೆ ಹಚ್ಚಿದ್ದಾರೆ.

ಕೊಲೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ವೈಯಕ್ತಿಕ ದ್ವೇಷ ಅಥವಾ ಹಳೆಯ ಜಗಳ ಈ ಕೃತ್ಯಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಹಲವರನ್ನು ವಿಚಾರಣೆ ನಡೆಸಿ ಮಾಹಿತಿ ಕಲೆಹಾಕುತ್ತಿದ್ದಾರೆ.

Post a Comment

0 Comments