Ticker

6/recent/ticker-posts

Ad Code

ಬದಿಯಡ್ಕ ನಿವಾಸಿ ದುಬೈಯಲ್ಲಿ ಕುಸಿದು ಬಿದ್ದು ಮೃತ್ಯು

ಬದಿಯಡ್ಕ :  ಬದಿಯಡ್ಕ ಕನಕಪ್ಪಾಡಿ ನಿವಾಸಿ ಕೊಲ್ಲಿ ಉದ್ಯೋಗಿಯಾದ  ಮಧ್ಯವಯಸ್ಕರೋರ್ವರು  ದುಬೈನಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಬದಿಯಡ್ಕ  ಬಾರಡ್ಕದ ಕನಕಪಾಡಿ ನಿವಾಸಿ ದಿ. ಬೆನ್ನಿ ಡಿ.ಸೋಜಾ ಮತ್ತು ಲೂಸಿ ದಂಪತಿಯ ಪುತ್ರ ಹೆನ್ರಿ ಡಿ.ಸೋಜಾ (58) ಮೃತ ವ್ಯಕ್ತಿ.  ಈ ಹಿಂದೆ ಕಾಸರಗೋಡು-ಬೆಳಿಂಜ ಮಾರ್ಗದಲ್ಲಿ ಕಾರ್ಯನಿರ್ವಹಿಸುವ ಖಾಸಗಿ ಬಸ್ ಚಾಲಕರಾಗಿದ್ದ ಇವರು ಕಳೆದ 35 ವರ್ಷಗಳಿಂದ ದುಬೈನಲ್ಲಿ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದಾರೆ. ನಿನ್ನೆ ಬೆಳಿಗ್ಗೆ  ತಮ್ಮ ನಿವಾಸದಲ್ಲಿ ಕುಸಿದು ಬಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರ ಜೀವ ಉಳಿಸಲಾಗಲಿಲ್ಲ. 

ಕಳೆದ ಮೂರು ವರ್ಷಗಳಿಂದ ತಲಪ್ಪಾಡಿ ಬಳಿಯ ತೊಕ್ಕೊಟ್ಟಿನಲ್ಲಿ ವಾಸಿಸುತ್ತಿದ್ದರು. ಮೃತರು ಪತ್ನಿ ಸವಿತಾ ಮೊಂತೆರೋ.  ಮಕ್ಕಳಾದ ಸೋನಾಲ್ ಡಿ.ಸೋಜಾ (10 ನೇ ತರಗತಿ ವಿದ್ಯಾರ್ಥಿನಿ) ಮತ್ತು ಶಾನನ್ ಡಿ.ಸೋಜಾ (7 ನೇ ತರಗತಿ ವಿದ್ಯಾರ್ಥಿನಿ). ಸಹೋದರರಾದ ವಿನ್ಸೆಂಟ್ ಡಿ'ಸೋಜಾ, ಗ್ರೇಸಿ ಡಿ'ಸೋಜಾ ಹಾಗೂ ಅಪಾರ ಬಂಧುಬಳಗವನ್ನಗಲಿದ್ದಾರೆ.

Post a Comment

0 Comments