ತಿರುವನಂತಪುರ : ಚಿರಯಿನ್‌ಕೀಳೂರಿನ ಅಜೂರ್‌ನಲ್ಲಿ ಬಾಲಕನೋರ್ವ ಹಾವು ಕಚ್ಚಿ ಸಾವನ್ನಪ್ಪಿದ್ದಾನೆ. ಇಲ್ಲಿನ ದಿಲೀಪ್ ಮತ್ತು ಅನು ದಂಪತಿಯ ಪುತ್ರ ದಿಲ್ಶನ್ (8) ಮೃತಪಟ್ಟ ಬಾಲಕ. ಬೆಳಗಿನ ಜಾವ 4 ಗಂಟೆಗೆ ಬಾಲಕನ ಕೂಗು ಕೇಳಿ ಎಚ್ಚೆತ್ತ ಹೆತ್ತವರು ಮಗುವಿನ ದೇಹದ ಮೇಲೆ ಹಾವು ಕಚ್ಚಿದ ಗುರುತು ಕಂಡು ತಕ್ಷಣ ಚಿರಯಿನ್‌ಕೀಳೂರು ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ದರು. ಪ್ರಥಮ ಚಿಕಿತ್ಸೆ ನೀಡಿದ ನಂತರ, ತಿರುವನಂತಪುರಂ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು, ಆದರೆ ಮಗುವಿನ ಜೀವ ಉಳಿಸಲಾಗಲಿಲ್ಲ.
ಮಾಹಿತಿ ತಿಳಿದು ಬಂದ ಸ್ಥಳೀಯರು ತಪಾಸಣೆ ನಡೆಸಿದಾಗ ಮಗು ಮಲಗಿದ್ದ ಕೋಣೆಯಲ್ಲಿ ನಾಗರಹಾವು ಪತ್ತೆಯಾಗಿದೆ. ತ್ರಿಶೂರ್‌ನಲ್ಲಿ ಹಾವು ಕಡಿತದಿಂದ ಒಂದು ಮಗು ಸಾವನ್ನಪ್ಪಿದ ಘಟನೆ ಮಾಸುವ ಮೊದಲೇ ಮತ್ತೊಂದು ಮಗು ದುರಂತ ಸಾವನ್ನಪ್ಪಿದೆ.

0 Comments