Ticker

6/recent/ticker-posts

Ad Code

ವಾಲ್ಪಾರೈ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ವಿದ್ಯಾರ್ಥಿ ಸೇರಿದಂತೆ 9 ಮಂದಿ ದುರ್ಮರಣ : ಇಂದು ಅಂತ್ಯಕ್ರಿಯೆ

 

ಮಲಪ್ಪುರಂ : ಕೇರಳವನ್ನು ಬೆಚ್ಚಿಬೀಳಿಸಿದ ವಾಲ್ಪಾರೈ ರಸ್ತೆ ಅಪಘಾತದಲ್ಲಿ  ಒಂಬತ್ತು ಮಂದಿ ಮೃತಪಟ್ಟಿದ್ದು ಅವರ  ಅಂತ್ಯಕ್ರಿಯೆ ಇಂದು ನಡೆಯಲಿದೆ. ಮರಣೋತ್ತರ ಪರೀಕ್ಷೆಯ  ಬಳಿಕ  ಬೆಳಿಗ್ಗೆ 9 ಗಂಟೆಗೆ ಪಾಂಗ್ ಅಂಬಲಪರಂ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಆವರಣದಲ್ಲಿ ಸಾರ್ವಜನಿಕ ದರ್ಶನದ ವ್ಯವಸ್ಥೆ ಮಾಡಲಾಗಿತ್ತು.  ಬಳಿಕ ಅಂತ್ಯಕ್ರಿಯೆ ನಡೆಯಲಿದೆ.

ವಾಲ್ಪಾರೈ ಅಪಘಾತದಲ್ಲಿ ಏಳು ಮಹಿಳೆಯರು ಮತ್ತು  ಓರ್ವ ವಿದ್ಯಾರ್ಥಿ  ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ಪಲ್ಲಿಪರಂಬ ಸರ್ಕಾರಿ ಎಲ್‌ಪಿ ಶಾಲೆಯ ಮುಖ್ಯೋಪಾಧ್ಯಾಯಿನಿ ಪಿ ಅಜಿತಾ (54) ಅವರ ಮೃತದೇಹವನ್ನು ಸಾರ್ವಜನಿಕ ದರ್ಶನದ ನಂತರ ಪುಲಮಂಥೋಲ್‌ನಲ್ಲಿರುವ ಅವರ ಮನೆಗೆ ಕೊಂಡೊಯ್ಯಲಾಗುವುದು. ನಂತರ ಶೋರನೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಶಿಕ್ಷಕಿ ರಮ್ಲತ್ (52) ಅವರ ಅಂತ್ಯಕ್ರಿಯೆ ಪಾಂಗ್ ಜುಮಾ ಮಸೀದಿಯ ರುದ್ರಭೂಮಿಯಲ್ಲಿ ನಡೆಯಲಿದೆ. ಶಿಕ್ಷಕಿ ಸುಹರಾ (43) ಮತ್ತು ಅವರ ಮಗ ಹಿಶಾಮ್ (12) ಅವರ ಅಂತ್ಯಕ್ರಿಯೆ ಪೂರ್ವ ಪಾಂಗ್ ಮಸೀದಿಯ ರುದ್ರಭೂಮಿಯಲ್ಲಿ ನಡೆಯಲಿದೆ. ಶಿಕ್ಷಕಿ ಆಶಾ (41) ಅವರ ಮೃತದೇಹವನ್ನು ಸಾರ್ವಜನಿಕ ದರ್ಶನದ ನಂತರ ಕೊಳತ್ತೂರಿನ ಅವರ ಮನೆಗೆ ಕೊಂಡೊಯ್ಯಲಾಗುವುದು. ನಂತರ ಅಂತ್ಯಕ್ರಿಯೆ ನಡೆಯಲಿದೆ. ಶಿಕ್ಷಕ ಅಬ್ದುಲ್ ಮಜೀದ್ (43) ಮತ್ತು ಅವರ ಪತ್ನಿ ರುಕಿಯಾ (39) ಅವರ ಅಂತ್ಯಕ್ರಿಯೆ ಮತ್ತತ್ ರುದ್ರಭೂಮಿಯಲ್ಲಿ ನಡೆಯಲಿದೆ. ಶಾಲೆಯ ಅಡುಗೆಯವರಾದ ಸಜಿತಾ (45) ಅವರ ಅಂತ್ಯಕ್ರಿಯೆ ಪಾಂಗ್ ಜುಮಾ ಮಸೀದಿಯ ದಫನ ಸ್ಥಳದಲ್ಲಿ ನಡೆಯಲಿದೆ. ಪಲ್ಲಿಪರಂಬ ಸರ್ಕಾರಿ ಎಲ್‌ಪಿ ಶಾಲೆಯ ಬಳಿಯ ಜಿಯುಪಿ ಶಾಲೆಯ ಶಿಕ್ಷಕಿ ಶಕಿನಾ (37) ಅವರ ಅಂತ್ಯಕ್ರಿಯೆ ಪಾಂಗ್ ಜುಮಾ ಮಸೀದಿಯ ದಫನ ಸ್ಥಳದಲ್ಲಿ ನಡೆಯಲಿದೆ. ಶಕಿನಾ ಇತ್ತೀಚೆಗೆ ಎಲ್‌ಪಿ ಶಾಲೆಯಿಂದ ಯುಪಿ ಶಾಲೆಗೆ ವರ್ಗಾವಣೆಗೊಂಡಿದ್ದರು.

ಮಲಪ್ಪುರಂ ಪಾಂಗ್ ಪಲ್ಲಿಪರಂಬ ಸರ್ಕಾರಿ ಎಲ್‌ಪಿ ಶಾಲೆಯ ಪ್ರವಾಸಿಗರ ತಂಡವನ್ನು ಹೊತ್ತೊಯ್ಯುತ್ತಿದ್ದ ವ್ಯಾನ್ ನಿನ್ನೆ ಸಂಜೆ 5.15 ಕ್ಕೆ ವಾಲ್ಪರ ಘಾಟ್  ರಸ್ತೆಯಲ್ಲಿ 500 ಅಡಿ ಎತ್ತರದಿಂದ ಕೆಳಕ್ಕೆ  ಉರುಳಿದೆ. ಪ್ರವಾಸಿ ಸ್ಥಳಗಳನ್ನು ನೋಡಿ   ಮನೆಗೆ ಹಿಂತಿರುಗುತ್ತಿದ್ದಾಗ, ಪಾಸ್‌ನ ಹದಿಮೂರನೇ ಹೇರ್ ಪಿನ್ ತಿರುವಿನಲ್ಲಿ ವಾಹನ ನಿಯಂತ್ರಣ ತಪ್ಪಿ, ಹಲವಾರು ಬಾರಿ ಉರುಳಿ ಒಂಬತ್ತನೇ ತಿರುವಿನಲ್ಲಿ ಬಿದ್ದಿದೆ. ಅಪಘಾತದಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ವಾಹನದಲ್ಲಿ 13 ಜನರಿದ್ದರು. ಮೂವರು ಗಂಭೀರ ಗಾಯಗಳೊಂದಿಗೆ ಕೊಯಮತ್ತೂರು ಸರ್ಕಾರಿ ವೈದ್ಯಕೀಯ ಕಾಲೇಜಿನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಸಜಿತಾ ಅವರ ಮಗ ಶಹದೀನ್, ವಾಹನದ ಚಾಲಕ ಮುಹಮ್ಮದ್ ಹಫೀಜ್ ಮತ್ತು ಶಾಲೆಯ ಚಾಲಕ ನೌಶಾದ್ ಗಂಭೀರ ಗಾಯಗಳೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಪವಾಡಸದೃಶವಾಗಿ ಗಾಯಗಳೊಂದಿಗೆ ಬದುಕುಳಿದ 11 ವರ್ಷದ ಮಸ್ನೀನ್ ಎಂಬ ಬಾಲಕಿಯನ್ನು ಮನೆಗೆ ಕರೆತಂದು ಪೆರಿಂಥಲ್ಮನ್ನಾ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಮಸ್ನೀನ್ ಅಪಘಾತದಲ್ಲಿ ಸಾವನ್ನಪ್ಪಿದ ಶಿಕ್ಷಕಿ ಶಕಿನಾ ಅವರ ಮಗಳು. ಮಸ್ನೀನ್ ಅವರಿಗೆ ತಾಯಿಯ ಸಾವಿನ ಬಗ್ಗೆ ತಿಳಿಸಲಾಗಿಲ್ಲ.

Post a Comment

0 Comments