Ticker

6/recent/ticker-posts

Ad Code

ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾದ ಮನೋರೋಗಿ ನಿಧನ

 


ಬದಿಯಡ್ಕ : ಪಳ್ಳತ್ತಡ್ಕ ಸಮೀಪದ  ಕಾಡಮನೆ ಪ್ರಶಾಂತಿ ಮಾನಸಿಕ ಆರೋಗ್ಯ ಕೇಂದ್ರದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾದ ರೋಗಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ತಲಶ್ಶೇರಿಯ ಚಾಂತೋಡ್‌ನ ವಲಿಯಪರಂಬತ್ ಮನೆಯ ವಿ.ಪಿ. ಅಬ್ದುಲ್ ಅಜೀಜ್ (74) ಮೃತ ವ್ಯಕ್ತಿ. 
ಕಾಡಮನೆ ಚಿಕಿತ್ಸಾ ಕೇಂದ್ರದ ಕೋಣೆಯೊಳಗೆ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾದ ಅಜೀಜ್ ಅವರನ್ನು ಕುಂಬಳೆ ಸಹಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ನಿಧನರಾದರು.   ಬದಿಯಡ್ಕ  ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದ್ದು, ಮೃತದೇಹವನ್ನು ಸಂಬಂಧಿಕರು ಮನೆಗೆ ಕೊಂಡೊಯ್ದರು.

Post a Comment

0 Comments