Ticker

6/recent/ticker-posts

Ad Code

ಬೈಕ್ ಚಲಾಯಿಸುತ್ತಾ ರೀಲ್ಸ್ ರೆಕಾರ್ಡ್; ಅಪಘಾತದಲ್ಲಿ ಯುವತಿ ದುರ್ಮರಣ, ಯುವಕ ಗಂಭೀರ!

 

ಗಾಜಿಯಾಬಾದ್‌ : ರೀಲ್ಸ್ ಹುಚ್ಚಾಟಕ್ಕೆ ಮತ್ತೊಂದು ಬಲಿಯಾದ ಘಟನೆ ನಡೆದಿದೆ.  ಉತ್ತರ ಪ್ರದೇಶದ ಗಾಜಿಯಾಬಾದ್‌ನ ಐಎಂಎಸ್ ಕಾಲೇಜು ಫ್ಲೈಓವರ್ ಬಳಿ ಈ ದುರ್ಘಟನೆ ಸಂಭವಿಸಿದ್ದು, ರೀಲ್ಸ್ ಚಿತ್ರೀಕರಿಸುತ್ತಾ  ಬೈಕ್  ಚಲಾಯಿಸುವಾಗ   ಬೈಕ್ ಡಿವೈಡರ್ ಗೆ ಢಿಕ್ಕಿಯಾಗಿದೆ. ಬೈಕ್ ಚಾಲನೆ ಮಾಡುತ್ತಿದ್ದ ಯುವತಿ  ಇಕ್ರಾ(19)  ಸ್ಥಳದಲ್ಲೇ ಸಾವನ್ನಪ್ಪಿದರೆ, ಹಿಂಬದಿಯಲ್ಲಿದ್ದ ಹಾಶಿಮ್ (20) ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರೂ ಗಾಜಿಯಾಬಾದ್‌ನ ಪಸೋಂಡಾ ನೆರೆಹೊರೆಯ ನಿವಾಸಿಗಳು. ಆರಂಭದಲ್ಲಿ ಈ ಜೋಡಿ ತಮ್ಮ ಮೊಬೈಲ್ ನಲ್ಲಿ  ವಿಡಿಯೋ ಮಾಡಿ ಅಪ್ಲೋಡ್ ಮಾಡಿತ್ತು.

ಇದರ ಬೆನ್ನಲ್ಲೇ ಯುವತಿ ಅತಿ ವೇಗದಲ್ಲಿ ಬೈಕ್ ಚಲಾಯಿಸಿದ್ದು, ನಿಯಂತ್ರಣ ಕಳೆದುಕೊಂಡಾಗ ಬೈಕ್ ಮೇಲ್ಸೇತುವೆಯ ಡಿವೈಡರ್ ಗೆ ಢಿಕ್ಕಿಯಾಗಿದೆ. ಈ ವೇಳೆ ಇಬ್ಬರೂ ನೆಲಕ್ಕುರುಳಿದ್ದು, ಇಬ್ಬರೂ ಹೆಲ್ಮೆಟ್ ಧರಿಸದ ಹಿನ್ನಲೆಯಲ್ಲಿ ಗಂಭೀರ ಗಾಯಗಳಾಗಿತ್ತು. ಸ್ಥಳೀಯರು ಕೂಡಲೇ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಿದ್ದಾರೆ. ಇಕ್ರಾ ಅವರ ತಲೆ ಮತ್ತು ಮುಖಕ್ಕೆ ತೀವ್ರ ಗಾಯಗಳಾಗಿದ್ದರೆ, ಹಾಶಿಮ್ ಅವರ ಕಾಲುಗಳು, ಸೊಂಟ ಮತ್ತು ಭುಜಕ್ಕೆ ಗಾಯಗಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

Post a Comment

0 Comments