ಕಾಸರಗೋಡು : ಆಂಬ್ಯುಲೆನ್ಸ್‌ನಲ್ಲಿ ಅತಿಂಜಲ್ ನಿವಾಸಿಗಳಾದ ಆಯೇಷಾ (68) ಮತ್ತು ಅವರ ಪುತ್ರಿ ನಜೀರಾ (47) ಮತ್ತು ಫರೀದ್ (28) ಇದ್ದರು. ಮೂವಿ ಮ್ಯಾಕ್ಸ್ ಥಿಯೇಟರ್ ರಸ್ತೆಯಿಂದ ಸರ್ವಿಸ್ ರಸ್ತೆ ಪ್ರವೇಶಿಸಿದ ಕಾರು ಆಂಬ್ಯುಲೆನ್ಸ್ ಗೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬ ಹಾಗೂ ಮೋಟಾರ್ ಬೈಕ್ ಗೆ ಡಿಕ್ಕಿ ಹೊಡೆದು ರಸ್ತೆಗೆ ಉರುಳಿದೆ. ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರು ಬಳಿಕ ಊರವರ ಮತ್ತು ಅಗ್ನಿಶಾಮಕ ದಳದ ನೇತೃತ್ವದಲ್ಲಿ ರಕ್ಷಣಾ ಕಾರ್ಯಚರಣೆ ನಡೆಯಿತು.ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು.

0 Comments