Ticker

6/recent/ticker-posts

Ad Code

ಮಗನನ್ನು ಕಳೆದುಕೊಂಡ ಮನೋ ವೇದನೆಯಿಂದ ಮನೆಯೊಳಗೆ ದಂಪತಿಗಳು ನೇಣಿಗೆ ಶರಣು

ಕಾಸರಗೋಡು : ದಂಪತಿಗಳ ಮೃತದೇಹ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೊಯಿನಾಚಿ ನಿವಾಸಿಗಳಾದ ಸಾಮಾಜಿಕ ಮುಂದಾಳು ವೇಣುಗೋಪಾಲನ್ ನಾಯರ್ (55) ಮತ್ತು ಅವರ ಪತ್ನಿ ಸ್ಮಿತಾ (45) ಮೃತಪಟ್ಟವರೆಂದು ಗುರುತಿಸಲಾಗಿದೆ. ಇಂದು (ಶುಕ್ರವಾರ) ಬೆಳಗ್ಗೆ ಇವರ ಮೃತದೇಹ‌ ಮನೆಯ ಮಲಗುವ ಕೋಣೆಯಲ್ಲಿ ಪತ್ತೆಯಾಗಿದೆ. ಇವರ ಏಕೈಕ ಪುತ್ರ, ಮಂಗಳೂರು ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಶಿವಾನಂದನ್ (19) ಡಿಸೆಂಬರ್ 29 ರ ರಾತ್ರಿ ಬೇಕಲ್ ಬೀಚ್ ಉತ್ಸವದಲ್ಲಿ ರಾಪರ್ ಗಾಯಕ ವೇಡನ್ ಅವರ ಸಂಗೀತ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ರೈಲು ಡಿಕ್ಕಿ  ಹೊಡೆದು ಸಾವನ್ನಪ್ಪಿದ್ದರು. ಇದೇ ಮನೋ ವೇದನೆಯಲ್ಲಿ ಬಳಲುತ್ತಿದ್ದ ದಂಪತಿಗಳು ಗುರುವಾರ ರಾತ್ರಿ ಆತ್ಮಹತ್ಯ ಪತ್ರ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ. ಮಾಹಿತಿ ಲಭಿಸಿದ ಮೇಲ್ಪರಂಬ ಪೊಲೀಸರು ಸ್ಥಳಕ್ಕೆ ತಲುಪಿ ಕ್ರಮ ಕೈಗೊಂಡರು.

 

Post a Comment

0 Comments