Ticker

6/recent/ticker-posts

Ad Code

ನಟನೆಗೂ ಸೈ, ಸಮಾಜ ಸೇವೆಗೂ ಜೈ : ನಾಟಕ ಕಲಾವಿದನಾಗಿ ಬೆಂಗಳೂರಿನಲ್ಲಿ ಅಭಿನಯದ ಬೆರಗು ಮೂಡಿಸಿದ ಎಣ್ಮಕಜೆ ಪಂ.ಸದಸ್ಯ ರಾಮಚಂದ್ರ ಎಂ.

 

ಪೆರ್ಲ : ಜನಾನುರಾಗಿ ಜನಪ್ರತಿನಿಧಿಯಾಗಿ ಎಣ್ಮಕಜೆ ಗ್ರಾಮ ಪಂಚಾಯತಿನ ಸ್ವರ್ಗ ವಾರ್ಡಿನಿಂದ ಸತತ ಎರಡು ಅವಧಿಯಲ್ಲೂ ಗೆಲುವಿನ ಸರದಾರ‌ನಾಗಿ ಗುರುತಿಸಿಕೊಂಡ ರಾಮಚಂದ್ರ ಎಂ ಎಂಬ ಜನ ಸೇವಕ ಪ್ರವೃತ್ತಿಯಲ್ಲಿ ನಾಟಕ ಕಲಾವಿದನಾಗಿ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ನಾಟಕವೊಂದರಲ್ಲಿ ಅಭಿನಯಿಸುವ ಮೂಲಕ ಪ್ರೇಕ್ಷಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಬಾಲ್ಯ ಕಾಲದಿಂದಲೇ ರಂಗಾಭಿನಯದ ಪ್ರವೃತ್ತಿ ಬೆಳೆಸಿಕೊಂಡ ಇವರು ಸ್ವರ್ಗ ನಾಡಿನ ಜನಪ್ರಿಯ ಸಮಾಜ ಸೇವಕ ಸ್ಚರ್ಗೀಯ ಎಂ.ಕೆ.ಬಾಲಕೃಷ್ಣ ಅವರ ಗರಡಿಯಲ್ಲಿ ಪಳಗಿದ ಸಾಧಕ. ಅವರದೇ ಹಾದಿಯಲ್ಲಿ ಜನ ಸೇವೆಗಿಳಿದ ಎಂ.ರಾಮಚಂದ್ರ ಎರಡು ಬಾರಿ ಜನಪ್ರತಿನಿಧಿಯಾಗಿ ಸ್ಥಾನವಹಿಸಿಕೊಂಡಿದ್ದಾರೆ. 

ಇದೀಗ ರವೀಂದ್ರ ಕಲಾಕ್ಷೇತ್ರ ಬೆಂಗಳೂರು ಇಲ್ಲಿ ಜರುಗಿದ 'ಸೂರ್ಯ ಕಲಾವಿದರು' ಆಯೋಜಿಸಿದ "ರಂಗ ಸಂಭ್ರಮ" ಎಂಬ ಕಾರ್ಯಕ್ರಮದಲ್ಲಿ ಶ್ರೀನಿವಾಸ ಪೆರಿಕ್ಕಾನ ನೇತೃತ್ವದ ಭೂಮಿಕಾ ಸಂಡೇ ಥಿಯೇಟರ್ ಸ್ವರ್ಗ ಪ್ರದರ್ಶಿಸಿದ "ದಲಿಯನ ಡೋಲು"  ನಾಟಕದ ಪ್ರಮುಖ ಪಾತ್ರದ ಮೂಲಕ ಜನ ಮನ್ನಣೆಗೆ ಪಾತ್ರರಾಗಿದ್ದಾರೆ. ಹಾವ ಭಾವದ ಜತೆಗೆ ಪಾತ್ರದ ಪೋಷಾಕಿನಲ್ಲೂ ಪರಕಾಯ ಪ್ರವೇಶಗೈದ  ರಾಮಚಂದ್ರ ಅವರ ಜನ ಸೇವೆಯ ಜತೆಗೆ ಕಲಾ ಸೇವೆಯಲ್ಲೂ ಗುರುತಿಸಿಕೊಂಡು ಯಶಸ್ವೀ  ನಾಟಕ ಅಭಿನಯಕ್ಕೆ ಎಲ್ಲರೂ ಪ್ರಶಂಸಿಸಿ ಗೌರವಿಸಿದ್ದಾರೆ. 

ಕರ್ನಾಟಕದ ರಾಜಧಾನಿ ಬೆಂಗಳೂರಲ್ಲಿ ಪ್ರದರ್ಶನಗೊಂಡ ಈ ನಾಟಕ ಕಾಸರಗೋಡಿನ ರಂಗಭೂಮಿಯ ಕಲಾವಿದರಿಂದ ಮತ್ತೊಂದು ಕೊಡುಗೆಯಾಗಿ ಕನ್ನಡ ರಂಗಭೂಮಿಯಲ್ಲಿ ಚಿರಸ್ಥಾಯಿಯಾಯಿತು.

Post a Comment

0 Comments