Ticker

6/recent/ticker-posts

Ad Code

ಮಂಗಳೂರಿನಲ್ಲಿ ಲಾರಿ ಚಾಲಕನಾಗಿದ್ದ ಯುವಕ ಕಟ್ಟತ್ತಡ್ಕದ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ

ಸೀತಾಂಗೋಳಿ : ಮಂಗಳೂರಿನಲ್ಲಿ ಲಾರಿ ಚಾಲಕನಾಗಿ ದುಡಿಯುತ್ತಿದ್ದ ಯುವಕನೋರ್ವ ಕಟ್ಟತ್ತಡ್ಕದ ತನ್ನ‌ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೈದ ಬಗ್ಗೆ ವರದಿಯಾಗಿದೆ. ಮೃತನನ್ನು ಪುತ್ತಿಗೆ ಕಟ್ಟತ್ತಡ್ಕ ಟೆಲಿಫೋನ್ ಎಕ್ಸ್ ಚೇಂಜ್ ಬಳಿಯ ನಿವಾಸಿ ವಸಂತ ನಾಯ್ಕ್ ರ ಪುತ್ರ ಪ್ರವೀಣ್ ಕುಮಾರ್ (35)  ಎಂದು ಗುರುತಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ಮಂಗಳೂರಿನ ಕೋಳಿ ಫಾರ್ಮ್ ಒಂದರಲ್ಲಿ  ಲಾರಿ ಚಾಲಕನಾಗಿ ದುಡಿಯುತ್ತಿದ್ದರು. ಮೊನ್ನೆ ಸಂಜೆ ಇವರು ಬೈಕ್ ನಲ್ಲಿ ತೆರಳುತ್ತಿದ್ದಾಗ ಅಮಿತ ಮದ್ಯಪಾನದ ಪ್ರಕರಣದಲ್ಲಿ ದಂಡ ವಿಧಿಸಿದ್ದರು. ಇಂದು ಬೆಳಗ್ಗೆ  ಮನೆಯ ಮಲಗುವ ಕೋಣೆಯಲ್ಲಿ ಇವರನ್ನು ಇಲಿ ವಿಷ ಸೇವಿಸಿ ಆತ್ಮಹತ್ಯೆಗೆತ್ನಿಸಿದ  ಸ್ಥಿತಿಯಲ್ಲಿ ಪತ್ತೆ ಹಚ್ಚಲಾಯಿತು. ಮದ್ಯದ ಜತೆಗೆ ಇಲಿ ವಿಷ ಸೇವಿಸಿರಬೇಕೆಂದು ಊಹಿಸಲಾಗಿದೆ.   ಕೂಡಲೇ ಕುಂಬಳೆ ಸಹಕಾರಿ ಆಸ್ಪತ್ರೆಗೆ ಸೇರಿಸಲಾಯಿತಾದರೂ ಮೃತಪಟ್ಟಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತರು ಅವಿವಾಹಿತರಾಗಿದ್ದಾರೆ. ಮಂಗಳೂರಿನಲ್ಲಿ ದುಡಿಯುವ ಸಂಸ್ಥೆಯಲ್ಲಿ ಆರ್ಥಿಕ ವ್ಯವಹಾರದ ಹೊರೆ ಇತ್ತು ಎನ್ನಲಾಗಿದೆ. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Post a Comment

0 Comments