ಕಾಸರಗೋಡು: ತೇಜಸ್ವಿನಿ ಸಹೋದಯ ಸಿ ಬಿ ಎಸ್ ಇ ಶಾಲೆಗಳ ಒಕ್ಕೂಟದ ವತಿಯಿಂದ ಪ್ರತಿವರ್ಷ ಆಯೋಜಿಸಲ್ಪಡುವ ಪ್ರತಿಷ್ಠಿತ 'ತೇಜಸ್ವಿನಿ ಸಹೋದಯ ಪ್ರತಿಭಾನ್ವೇಷಣಾ' ಪರೀಕ್ಷೆಯ ಸಮಗ್ರ ವಿಭಾಗದಲ್ಲಿ ಶ್ರೀಹಾನ್ ಉಚ್ಚಿಲ್ ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನದೊಂದಿಗೆ ಅಭೂತಪೂರ್ವ ಸಾಧನೆಗೈದಿದ್ದಾರೆ. ವಿದ್ಯಾನಗರದ ಚಿನ್ಮಯ ವಿದ್ಯಾಲಯದ ಒಂದನೇ ತರಗತಿಯ ವಿದ್ಯಾರ್ಥಿಯಾದ ಈತ ಕೇವಲ ಆರು ವರ್ಷದ ಪ್ರಾಯದಲ್ಲೇ ಇಂತಹ ಕಠಿಣ ಪರೀಕ್ಷೆಯಲ್ಲಿ ಮೊದಲ ಸ್ಥಾನ ಗಳಿಸಿರುವುದು ಶೈಕ್ಷಣಿಕ ಪರಿಣತಿಯನ್ನು ಎತ್ತಿ ತೋರಿಸುತ್ತದೆ. ಶ್ರೀಹಾನ್ ಕೇವಲ ಓದಿನಲ್ಲಿ ಮಾತ್ರವಲ್ಲದೆ, ಕಲೆ ಮತ್ತು ಕ್ರೀಡೆಯಲ್ಲೂ ಮುಂಚೂಣಿಯಲ್ಲಿದ್ದಾರೆ. ಶಾಲೆಯ ಆಟೋಟ ಸ್ಪರ್ಧೆಗಳಲ್ಲಿ ಮೊದಲ ಬಹುಮಾನ ಗಳಿಸಿರುವ ಈತ ಪ್ರಸ್ತುತ ತುಳುನಾಡನ್ ಕಲರಿಪ್ಪಯಟ್ಟ್,ಚಿತ್ರರಚನೆ,
ಸಂಗೀತ ಮತ್ತು ಕೀಬೋರ್ಡ್ ವಾದನದ ಶಿಕ್ಷಣವನ್ನೂ ಪಡೆಯುತ್ತಿದ್ದು, ಬಹುಮುಖ ಪ್ರತಿಭೆಯಾಗಿ ಹೊರಹೊಮ್ಮುತ್ತಿದ್ದಾರೆ. ಕವಯತ್ರಿ ದಿವ್ಯಾಗಟ್ಟಿ ಪರಕ್ಕಿಲ ಮತ್ತು ಸುನಿಲ್ ಉಚ್ಚಿಲ್ ದಂಪತಿಗಳ ಪುತ್ರನಾದ ಶ್ರೀಹಾನ್ ನ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ ಅಭಿನಂದಿಸಿದೆ.

0 Comments