Ticker

6/recent/ticker-posts

Ad Code

ಕೇರಳ ವಿಧಾನಸಭಾ ಚುನಾವಣೆ : ಧರ್ಮಡಂ ಕ್ಷೇತ್ರದಿಂದ ಪಿಣರಾಯಿ ವಿಜಯನ್ ನಾಮಪತ್ರ ಸಲ್ಲಿಕೆ

 

ಕೇರಳ : ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಧರ್ಮಡಂ ವಿಧಾನಸಭಾ ಕ್ಷೇತ್ರದಿಂದ ಎಲ್ ಡಿ ಎಫ್ ಅಭ್ಯರ್ಥಿಯಾಗಿ ಇಂದು (ಮಾರ್ಚ್ 19) ನಾಮಪತ್ರ ಸಲ್ಲಿಸಿದ್ದಾರೆ. ಕಣ್ಣೂರಿನ ಧರ್ಮಡಂ ವಿಧಾನಸಭಾ ಕ್ಷೇತ್ರದಿಂದ ಎಲ್ ಡಿ ಎಫ್ ಅಭ್ಯರ್ಥಿಯಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂದು ಬೆಳಗ್ಗೆ ಚುನಾವಣಾಧಿಕಾರಿ ಸಚಿನ್ ಕೃಷ್ಣ ಅವರ ಮುಂದೆ ನಾಮಪತ್ರ ಸಲ್ಲಿಸಿದರು. ಅವರೊಂದಿಗೆ ಸ್ಪೀಕರ್ ಎ. ಎನ್. ಶಂಶೀರ್, ಸಿಪಿಐ (ಎಂ) ಕೇಂದ್ರ ಸಮಿತಿ ಸದಸ್ಯ .ಪಿ ಜಯರಾಜನ್, ಜಿಲ್ಲಾ ಕಾರ್ಯದರ್ಶಿ ಕೆ .ಕೆ ರಾಗೇಶ್ ಮತ್ತು ಪಿ. ಶಶಿ ಮೊದಲಾದವರಿದ್ದರು.

ಪುನಲೂರಿನ ಗಾಂಧಿ ಭವನದ ಪದಾಧಿಕಾರಿಗಳಾದ ಪುನಲೂರು ಸೋಮರಾಜನ್ ಮತ್ತು ಕೆ. ವರದರಾಜನ್ ಅವರು ವಿಜಯನ್ ಅವರಿಗೆ ಚುನಾವಣಾ ಠೇವಣಿ ಮೊತ್ತವನ್ನು ಹಸ್ತಾಂತರಿಸಿದರು. ಈ ಮೊತ್ತವನ್ನು ಬಾರಿಯೂ ಗಾಂಧಿ ಭವನದ ನಿವಾಸಿಗಳು ನೀಡಿದ್ದು, ವಿಜಯನ್ ಅವರ ಸ್ಪರ್ಧೆಗಾಗಿ ಅವರು ಸತತ ಮೂರನೇ ಬಾರಿ ಠೇವಣಿ ಮೊತ್ತವನ್ನು ಒದಗಿಸುತ್ತಿದ್ದಾರೆ. ಕರಕುಶಲ ವಸ್ತುಗಳು ಮತ್ತು ಅವರು ತಯಾರಿಸಿದ ಇತರ ವಸ್ತುಗಳ ಮಾರಾಟದ ಮೂಲಕ ಬರುವ ಆದಾಯದ ಒಂದು ಭಾಗದಿಂದ ಈ ಕೊಡುಗೆ ಬರುತ್ತದೆ.

Post a Comment

0 Comments