Ticker

6/recent/ticker-posts

Ad Code

ಮುಳ್ಳೇರಿಯದಲ್ಲಿ ಯುವಕನ ಹಾಗೂ ಸ್ನೇಹಿತನ ಮೇಲೆ ಹಲ್ಲೆ ಪ್ರಕರಣದ ಓರ್ವ ಆರೋಪಿಯ ಬಂಧನ

 

ಮುಳ್ಳೇರಿಯ : ಯುವಕನ ಹಾಗೂ ಸ್ನೇಹಿತನ ಮೇಲೆ ಹಲ್ಲೆ ಪ್ರಕರಣದ ರ್ವ ಆರೋಪಿಯನ್ನು ಬಂಧಿಸಲಾಗಿದೆ. ಆದೂರು ನಿವಾಸಿಯಾದ  ಮೊಹಮ್ಮದ್ ಅಂಬ್ರಾಸ್ ಅಲಿ ಬಂಧಿತ ವ್ಯಕ್ತಿ.

 ಕಾಸರಗೋಡು ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಮೊಹಮ್ಮದ್ ಅಂಬ್ರಾಸ್ ಅವರನ್ನು ಎರಡು ವಾರಗಳ ಕಾಲ ರಿಮ್ಯಾಂಡ್ ಮಾಡಿದೆ. ಮಾರ್ಚ್ 4 ರಂದು ರಾತ್ರಿ 9.30 ರ ಸುಮಾರಿಗೆ ಮುಳ್ಳೇರಿಯ ಮದೀನಾ ಹೋಟೆಲ್ ಮುಂದೆ ಸುಲೈಮಾನ್ ಫಾರಿಸ್ (34) ಮತ್ತು ಆತನ ಸ್ನೇಹಿತರಾದ ಸುಲೈಮಾನ್ ಸಾಬಿತ್ ಮತ್ತು ಪೃಥ್ವಿ ಎಂಬಿವರ ಮೇಲೆ ಹಲ್ಲೆ ನಡೆಸಿದ ಪ್ರಕರಣದ  ಆರೋಪಿಯಾಗಿದ್ದಾನೆ ಬಂಧಿತ. ಕಬಡ್ಡಿ ಪಂದ್ಯಾವಳಿಗೆ ಸಂಬಂಧಿಸಿದ ವಿವಾದವೇ ಹಲ್ಲೆಗೆ ಕಾರಣ. ಸುಲೈಮಾನ್ ಫಾರಿಸ್ ಮೇಲೆ ದಾಳಿ ಮಾಡುವುದನ್ನು ತಡೆಯಲು ಪ್ರಯತ್ನಿಸಿದ್ದಕ್ಕಾಗಿ ಸುಲೈಮಾನ್ ಸಬಿತ್ ಮತ್ತು ಪೃಥ್ವಿ ಅವರ ಮೇಲೆ ಹಲ್ಲೆ ನಡೆಸಲಾಗಿದೆ.

Post a Comment

0 Comments