ಮಾಣಿಲ : ಶ್ರೀ ಕಾಳಿಕಾ ಕಲಾ ಸಂಘ (ರಿ) ಕುಕ್ಕಾಜೆ ಇದರ ವಾರ್ಷಿಕ ಮಹಾಸಭೆ, ಲೆಕ್ಕಪತ್ರ ಮಂಡನೆ ಮತ್ತು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಕ್ಷೇತ್ರ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿಯವರ ಉಪಸ್ಥಿತಿಯಲ್ಲಿ ನಡೆಯಿತು.
ಸಂಘದ ನೂತನ ಅಧ್ಯಕ್ಷರಾಗಿ ನವೀನ್ ತಾರಿದಳ, ಕಾರ್ಯದರ್ಶಿಯಾಗಿ ನಾಗೇಶ್ ಕೂಟೇಲು, ಕೋಶಾಧಿಕಾರಿಯಾಗಿ ಕೃಷ್ಣಪ್ಪ ತಾರಿದಳ, ಉಪಾಧ್ಯಕ್ಷರಾಗಿ ಸುಬ್ಬ ಕುಲಾಲ್ ಪಳನೀರು ಮತ್ತು ಜೊತೆ ಕಾರ್ಯದರ್ಶಿಯಾಗಿ ನಾರಾಯಣ ನಾರ್ಜಾಲ್ ಇವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ 2024-26 ಅವಧಿಯಲ್ಲಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ವಾಸಪ್ಪ ಹಿರೇಬಂಡಾಡಿ ಮತ್ತು ಕಾರ್ಯದರ್ಶಿಯಾಗಿದ್ದ ನಾರಾಯಣ ಪಿ.ಕೆ ಕುಕ್ಕಾಜೆ ಇವರನ್ನು ಅಭಿನಂದಿಸಲಾಯಿತು.

0 Comments