ಕಾಸರಗೋಡು : ಪತ್ನಿಯ ಸಾವಿನಿಂದ ಮಾನಸಿಕವಾಗಿ ನೊಂದ ಪತಿ ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ. ಪಣತ್ತಡಿ ಸಮೀಪದ ಕೋಳಿಚ್ಚಾಲು ಸಜೀವನ್ (60) ಮೃತಪಟ್ಟ ವ್ಯಕ್ತಿ. ಸಜೀವನ್ ಅವರ ಪತ್ನಿ ಬಿ.ವಿ. ಶೋಭನ (53). ಜನವರಿ 28 ರ ರಾತ್ರಿ ಮನೆಯಲ್ಲಿ ಇಲಿಗಳನ್ನು ಕೊಲ್ಲಲು ವಿಷ ಹಾಕಿರಿಸಿದ ಗ್ಲಾಸಿನ ನೀರು ಅರಿಯದೆ ಕುಡಿದು ಅಸ್ವಸ್ಥರಾಗಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಫೆಬ್ರವರಿ 3 ರಂದು ಮೃತಪಟ್ಟಿದ್ದರು. ಅವರ ಹಠಾತ್ ಸಾವು ಸಜೀವನ್ ಅವರನ್ನು ಮಾನಸಿಕವಾಗಿ ನೊಂದುಕೊಳ್ಳುವಂತಾಗಿಸಿದ್ದು, ಇದೀಗ ಅವರ ಆತ್ಮಹತ್ಯೆಗೆ ಇದೇ ಕಾರಣ ಎಂದು ಶಂಕಿಸಲಾಗಿದೆ. ರಾಜಾಪುರಂ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿದ್ದಾರೆ.

0 Comments