Ticker

6/recent/ticker-posts

Ad Code

ಉದ್ಯೋಗ ನಿಮಿತ್ತ ಪ್ರವಾಸದ ಮಧ್ಯೆ ರೈಲಿನಿಂದ ಹೊಳೆಗೆ ಬಿದ್ದು ಬದಿಯಡ್ಕದ ಯುವಕ ಮೃತ್ಯು

 

ಬದಿಯಡ್ಕ: ಬದಿಯಡ್ಕ ನಿವಾಸಿಯಾದ ಯುವಕ ಚಾಲಕುಡಿಯಲ್ಲಿ ರೈಲಿನಿಂದ ಹೊಳೆಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಬದಿಯಡ್ಕ ಪೇಟೆಯ ದಿವಂಗತ ರವೀಂದ್ರ ಶೆಣೈ ಅವರ ಪುತ್ರ ಅಚ್ಚು ಯಾನೆ ಅಚ್ಚುತಾನಂದ ಶೆಣೈ (40) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಇವರು  ಮಲ್ಟಿ ಸ್ಟೇಟ್ ಕೋಪರೇಟಿವ್ ಸೊಸೈಟಿಯ ತ್ರಿಶ್ಯೂರು ರೀಜನಲ್ ಆಫೀಸಿನಲ್ಲಿ ಇನ್ಸ್ಪೆಕ್ಟರ್ ಆಗಿದ್ದರು.  ಉದ್ಯೋಗ ನಿಮಿತ್ತ ಪ್ರವಾಸದ ಮಧ್ಯೆ ಈ ಘಟನೆ ನಡೆದಿದೆ ಎಂದು ಮನೆಗೆ ಮಾಹಿತಿ ಲಭಿಸಿದೆ.

ಮೃತರು ತಾಯಿ ರಮಾ ಶೆಣೈ, ಪತ್ನಿ ಅನುಷ್ಕ, ಸಹೋದರಿ ಗಾಯತ್ರಿ ಎಂಬಿವರನ್ನು ಅಗಲಿದ್ದಾರೆ. ವಿಷಯ ಅರಿತ ಸಂಬಂಧಿಕರು ಚಾಲಕುಡಿಗೆ ತೆರಳಿದ್ದಾರೆ. ಅಚ್ಚುತಾನಂದ ಅವರು ಈ ಹಿಂದೆ ಬದಿಯಡ್ಕ‌ ನಿವಾಸಿಯಾಗಿದ್ದು  ಇದೀಗ ನೀರ್ಚಾಲಿನಲ್ಲಿ ಮನೆ ಮಾಡಿ ವಾಸಿಸುತ್ತಿದ್ದರು.

Post a Comment

0 Comments