ಪೆರ್ಲ : ಎಣ್ಮಕಜೆ ಮೂಲದ ಪತ್ರಕರ್ತೆ ಸರಿತ ರೈ ಅವರಿಗೆ 2025ನೇ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿಯ ವಿಶೇಷ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪ್ರದಾನ ಮಾಡಿದರು. ಬೆಂಗಳೂರಿನಲ್ಲಿ ನೆಲೆಸಿರುವ ಸರಿತ ಅವರು ಮೊದಲು ಇಂಡಿಯಾ ಟುಡೇ ಪತ್ರಿಕೆಯ ಕರ್ನಾಟಕ ವರದಿಗಾರ್ತಿ ಆಗಿದ್ದರು. ಅನಂತರ ನ್ಯೂಯಾರ್ಕ್ ಟೈಮ್ಸ್ ಫೋರ್ಬ್ಸ್ ನಂತಹ ವಿದೇಶಿ ಪತ್ರಿಕೆ ನ್ಯೂಸ್ ಏಜೆನ್ಸಿಗಳಿಗೆ ಕೆಲಸ ಮಾಡಿದ್ದಾರೆ. ಈಗ ಅವರು ಎಐ ವಿಷಯಗಳ ಬಗ್ಗೆ ಏಷ್ಯಾದ ಬ್ಲೂಂಬರ್ಗ್ ಸುದ್ದಿ ಸಂಸ್ಥೆ ವರದಿಗಾರ್ತಿ ಆಗಿದ್ದಾರೆ. ಇವರು ಎಣ್ಮಕಜೆ ಅರೆಮಂಗಿಲ ಪ್ರಸಾದ್ ರೈ ಮತ್ತು ರಾಜಲಕ್ಷ್ಮಿ ರೈ ಅವರ ಪುತ್ರಿಯಾಗಿದ್ದಾರೆ.

0 Comments