ಪೆರ್ಲ: ನೋವು ನಿವಾರಕ ಮಾತ್ರೆಗಳ ಮಿತಿಮೀರಿದ ಸೇವನೆಯಿಂದ ಚಿಕಿತ್ಸೆ ಪಡೆಯುತ್ತಿದ್ದ ಮಧ್ಯವಯಸ್ಕ ವ್ಯಕ್ತಿಯೊಬ್ಬರು ಸಾವನ್ನಪ್ಪಿದರು. ಪೆರ್ಲ ಬಜಕೂಡ್ಲಿನ ಮುಂಡಪ್ಪ ರೈ (58) ಮೃತ ವ್ಯಕ್ತಿ. ಅತಿಯಾದ ನೋವು ನಿವಾರಕ ಮಾತ್ರೆಗಳನ್ನು ಸೇವಿಸಿದ ನಂತರ ಗಂಭೀರ ಸ್ಥಿತಿಯಲ್ಲಿದ್ದ ಮುಂಡಪ್ಪ ರೈ ಅವರನ್ನು ಚೆಂಗಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾದರು.
ಮೃತರು ಪತ್ನಿ ಪದ್ಮಾವತಿ. ಮಕ್ಕಳಾದ ಸುಪ್ರಿತಾ, ಸುಜಿತ್ (ಗಲ್ಫ್). ಸಹೋದರ ಶಾಂತಾರಾಮ್, ಸಂಕಪ್ಪ ರೈ, ವಿಠಲ್ ರೈ,ಸಹೋದರಿಯರಾದ ಶೀಲಾವತಿ, ಶಾರದಾ ಎಂಬಿವರನ್ನಗಲಿದ್ದಾರೆ.

0 Comments