Ticker

6/recent/ticker-posts

Ad Code

ಪಡ್ರೆ ಶ್ರೀ ಜಟಾಧಾರಿ ಮೂಲಸ್ಥಾನಕ್ಕೆ ಶಿಲ್ಪ ಶಾಸ್ತ್ರಜ್ಞರ ಭೇಟಿ, ಕಾಮಗಾರಿ ಪರಿಶೀಲನೆ

 

ಪೆರ್ಲ: ಪಡ್ರೆ ಸ್ವರ್ಗ ಮಲೆತ್ತಡ್ಕ ಶ್ರೀ ಜಟಾಧಾರಿ ಮೂಲಸ್ಥಾನಕ್ಕೆ ಶಿಲ್ಪ ಶಾಸ್ತ್ರಜ್ಞ ಕೃಷ್ಣಪ್ರಸಾದ ಮುನಿಯಂಗಳ ಸೋಮವಾರ ಸಂಜೆ ಭೇಟಿ ನೀಡಿದರು. ಮೂಲಸ್ಥಾನದ ಬಳಿ ನಿರ್ಮಾಣ ಹಂತದಲ್ಲಿರುವ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಶಿಲಾಮಯ ಗರ್ಭಗುಡಿಯ ನವನಿರ್ಮಾಣ ಕಾಮಗಾರಿಯನ್ನು  ಪರಿಶೀಲನೆ ನಡೆಸಿದ ಅವರು ಸಲಹೆ ಸೂಚನೆಗಳನ್ನು ನೀಡಿದರು‌. 

ಶ್ರೀ ಕ್ಷೇತ್ರದ ವಾಯುವ್ಯ-ಉತ್ತರ ದಿಕ್ಕಿನಲ್ಲಿರುವ ಜಟಾಧಾರಿ ಬನದ ಜೀರ್ಣೋದ್ಧಾರ ಮತ್ತು ಸುತ್ತು ಪೌಳಿ ಮಾರ್ಕಿಂಗ್ ಕುರಿತು ನವ ನಿರ್ಮಾಣ ಸಮಿತಿಯ ಪದಾಧಿಕಾರಿಗಳು, ಸದಸ್ಯರ ಜೊತೆ ಚರ್ಚಿಸಿದರು. 

ಶಿಲಾಮಯ ಗರ್ಭಗುಡಿಯ ನಿರ್ಮಾಣದ ಜವಾಬ್ದಾರಿ ವಹಿಸಿರುವ ಕಾರ್ಕಳದ ದಯಾನಂದ, ಕ್ಷೇತ್ರ ಸಮಿತಿ ಪದಾಧಿಕಾರಿಗಳು, ಭಕ್ತರು ಉಪಸ್ಥಿತರಿದ್ದರು.

Post a Comment

0 Comments