Ticker

6/recent/ticker-posts

Ad Code

ಅನಾರೋಗ್ಯ ಪೀಡಿತ ತಾಯಿಯನ್ನು ಬಹುಮಹಡಿ ಕಟ್ಟಡದಿಂದ ತಳ್ಳಿ ಕೊಲೆ; ಆರೋಪಿ ಪೊಲೀಸ್ ವಶಕ್ಕೆ

 

ಬೆಂಗಳೂರು : ಬಹುಮಹಡಿ ಕಟ್ಟಡದಿಂದ ತಳ್ಳಿ ಹೆತ್ತ ತಾಯಿಯನ್ನು  ಮಗನೇ  ಕೊಲೆ ಮಾಡಿರುವ ಘಟನೆ ಆರ್‌ಆರ್ ನಗರ  ಬೆಮಲ್ ಲೇಔಟ್‌ನಲ್ಲಿ ನಡೆದಿದೆ. ಸಾವಿತ್ರಮ್ಮ (72) ಕೊಲೆಯಾದ ದುರ್ದೈವಿ. ಮಗ ವೆಂಕಟೇಶ್ ವೃದ್ಧ ತಾಯಿಯನ್ನು  ಬಹುಮಹಡಿ ಕಟ್ಟಡ ಮೇಲಿನಿಂದ ತಳ್ಳಿ ಕೊಲೆ ಮಾಡಿದ್ದಾನೆ. ಪಾರ್ಶ್ವವಾಯು ಪೀಡಿತರಾಗಿದ್ದ ಸಾವಿತ್ರಮ್ಮ, ಸುಮಾರು ಐದಾರು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.  ತಾಯಿ ಅವಸ್ಥೆಯಿಂದ ನೊಂದಿದ್ದ ಮಗ ಕಟ್ಟಡದ ಮೂರನೇ ಮಹಡಿಯಿಂದ ತಳ್ಳಿ ಕೊಲೆ ಮಾಡಿದ್ದಾನೆ. 

ಘಟನಾ ಸ್ಥಳಕ್ಕೆ ಆರ್‌ಆರ್ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಗ ವೆಂಕಟೇಶ್‌ನನ್ನು  ಆರ್‌ಆರ್ ನಗರ ಪೊಲೀಸರು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಿದ್ದಾರೆ.


Post a Comment

0 Comments