Ticker

6/recent/ticker-posts

Ad Code

ಮನ ನೊಂದು ಮಧ್ಯವಯಸ್ಕ ಆತ್ಮಹತ್ಯೆ


 ಬದಿಯಡ್ಕ : ಮನೆಯವರು ಇಲ್ಲದ ವೇಳೆ ಮನನೊಂದು ಮಧ್ಯವಯಸ್ಕರೋರ್ವರು ಮನೆಯ ಅಡುಗೆ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಎಣ್ಮಕಜೆ ಪಂಚಾಯತಿನ ಪಡ್ರೆ ವಾಣಿನಗರ ಸಮೀಪ ಅಜಕ್ಕಲ ಮೂಲೆಯ  ಪೊಯ್ಯೆ ಎಂಬಲ್ಲಿನ ನಿವಾಸಿ ಕುಂಞಿರಾಮನ್ ಮಣಿಯಾಣಿ ಎಂಬವರ ಪುತ್ರ ಸುರೇಶ್ ಮಣಿಯಾಣಿ (60) ಮೃತರು ಎಂದು ಗುರುತಿಸಲಾಗಿದೆ. ಶನಿವಾರ ಬೆಳಗ್ಗೆ 11ರಿಂದ ಸಂಜೆ 6ರ ನಡುವೆ ಈ ಘಟನೆ ನಡೆದಿದೆ ಎಂದು ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.  ಬದಿಯಡ್ಕ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತರು ಪತ್ನಿ ಸೀತಮ್ಮ. ಮಕ್ಕಳಾದ ರಾಜೇಶ್ವರಿ, ಸುಚಿತ್ರಾ, ಕೃಷ್ಣ ಕುಮಾರ್. ಅಳಿಯಂದಿರಾದ ಅಶೋಕ್, ವಿಜಯಕುಮಾರ್ ಹಾಗೂ ಸಹೋದರ ಸಹೋದರಿಯರಾದ ಸುಧಾಮ ಮಣಿಯಾಣಿ, ಚಂದ್ರಾವತಿ, ಸುಮತಿ ಎಂಬಿವರನ್ನಗಲಿದ್ದಾರೆ.

Post a Comment

0 Comments