Ticker

6/recent/ticker-posts

Ad Code

ಎಚ್5 ಎನ್1 ವೈರಸ್ ಪತ್ತೆ : ಕೋಳಿ ಅಂಗಡಿ ತಪಾಸಣೆ ನಡೆಸಲು ಸೂಚನೆ

 

ಚಿಕನ್ ಪ್ರಿಯರಿಗೆ ಎಚ್5 ಎನ್1 ಹಕ್ಕಿ ಜ್ವರ ಭೀತಿ ಎದುರಾಗಿದೆ.  ಬೆಂಗಳೂರಿನ ಹೆಸರಘಟ್ಟದಲ್ಲಿರುವ ರಾಜ್ಯ ಸರ್ಕಾರದ ಅಧೀನದಲ್ಲಿರುವ ಪೌಲ್ಟ್ರಿ ಫಾರಂನಲ್ಲಿ ಎಚ್5 ಎನ್1 ವೈರಸ್ ಪತ್ತೆಯಾಗಿದೆ. ತಕ್ಷಣವೇ ಫಾರಂ ಅನ್ನು ಮುಚ್ಚಲಾಗಿದ್ದು, ಫಾರಂನಲ್ಲಿರುವ ಕೋಳಿಗಳನ್ನು  ಗುಂಡಿ ತೆಗೆದು ಮುಚ್ಚಿದ್ದಾರೆ ಎನ್ನಲಾಗಿದೆ.

ಪೌಲ್ಟ್ರಿ ಫಾರಂನಲ್ಲಿ ತಪಾಸಣೆ ಮಾಡಿ ಪರಿಶೀಲನೆ ನಡೆಸಲಾಗಿದ್ದು,, ಕೋಳಿ ಸಾಕಣೆಗಾರರನ್ನು  ಕ್ವಾರಂಟೈನ್ ಮಾಡಿರುವ ವೈದ್ಯಾಧಿಕಾರಿಗಳು. ಸರ್ಕಾರದ ಪಶು ವೈದ್ಯಾಧಿಕಾರಿಗಳಿಂದ ಸುತ್ತಮುತ್ತ ಪಂಚಾಯಿತಿಗಳಿಗೂ ನೋಟಿಸ್ ನೀಡಿದ್ದಾರೆ. ಕೋಳಿ ಸಾಕಣೆ ಶೆಡ್ ಹಾಗೂ ಕೋಳಿ ಅಂಗಡಿಗಳಲ್ಲಿ ತಪಾಸಣೆ ನಡೆಸುವಂತೆ ಸೂಚನೆ ನೀಡಲಾಗಿದೆ. ಬಿಸಿಲ ತಾಪದಲ್ಲಿ  ಎಚ್5 ಎನ್1 ಹಕ್ಕಿ ಜ್ವರ ಭೀತಿ ಹೆಚ್ಚಿಸಿದೆ. ಬಿಸಿಲಿನಿಂದ ಈ ವೈರಸ್ ಹರಡುವ ಸಾಧ್ಯತೆ ಹೆಚ್ಚಿದೆ ಎಂದು ತಜ್ಞರು ತಿಳಿಸಿದ್ದಾರೆ. 

ಹಕ್ಕಿ ಜ್ವರ (Bird Flu - H5N1) ಸೋಂಕಿತ ಪಕ್ಷಿಗಳಿಂದ ಮನುಷ್ಯರಿಗೆ ಹರಡುವ ಅಪಾಯಕಾರಿ ಸಾಂಕ್ರಾಮಿಕ ರೋಗವಾಗಿದೆ. ಜ್ವರ, ಕೆಮ್ಮು, ಗಂಟಲು ನೋವು ಮತ್ತು ಉಸಿರಾಟದ ತೊಂದರೆ ಇದರ ಮುಖ್ಯ ಲಕ್ಷಣಗಳು. ಕೋಳಿ ಮಾಂಸ, ಮೊಟ್ಟೆಗಳನ್ನು ಚೆನ್ನಾಗಿ ಬೇಯಿಸಿ (70°C ಗಿಂತ ಹೆಚ್ಚು) ಸೇವಿಸಬೇಕು. ಹಸಿ ಮಾಂಸವನ್ನು ಮುಟ್ಟಿದ ನಂತರ ಕೈಗಳನ್ನು ತೊಳೆದು, ಸೋಂಕಿತ ಹಕ್ಕಿಗಳ ಸಂಪರ್ಕದಿಂದ ದೂರವಿದ್ದು, ಮಾಸ್ಕ್ ಧರಿಸುವ ಮೂಲಕ ಮುನ್ನೆಚ್ಚರಿಕೆ ವಹಿಸಬೇಕು.

Post a Comment

0 Comments