ಕೋಝಿಕೋಡ್ : ಫ್ರಿಡ್ಜ್ ನಲ್ಲಿ ಇಟ್ಟಿದ್ದ ಹರಿವೆಯನ್ನು ಬೇಯಿಸಿ ತಿಂದ ಒಂದೇ ಕುಟುಂಬದ ನಾಲ್ವರು ಸದಸ್ಯರು ಆಸ್ಪತ್ರೆಗೆ ದಾಖಲಾಗಿದ್ದಾರೆ. ತಾಮರಶ್ಶೇರಿಯ ಅಂಬಲಮುಕ್ಕುನ ಶಾಂತಕುಮಾರಿ (68), ಶ್ರೀಜಾ (43), ಸುಧೀರ್ (42) ಮತ್ತು ಆರ್ದ್ರಾ (20) ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಫ್ರಿಡ್ಜ್ ನಲ್ಲಿ ಇಟ್ಟಿದ್ದ ಪಾಲಕ್ ಅನ್ನು ಅವರು ಬೇಯಿಸಿ ತಿಂದಿದ್ದು, ಬಳಿಕ ಅಸ್ವಸ್ಥತೆ ಕಂಡುಬಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಹರಿವೆಯಲ್ಲಿ ಉಂಟಾದ ರಾಸಾಯನಿಕ ಬದಲಾವಣೆಯಿಂದಾಗಿ ಆಹಾರ ವಿಷವಾಗಿರಬಹುದೆಂದು ವೈದ್ಯರು ತಿಳಿಸಿದ್ದಾರೆ. ಮಿಕ್ಕುಳಿದ ಹರಿವೆಯನ್ನು ಪರಿಶೋಧನೆಗಾಗಿ ಕಳುಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

0 Comments