Ticker

6/recent/ticker-posts

Ad Code

ಪೆರಡಾಲ ಬ್ರಹ್ಮಕಲಶೋತ್ಸವಕ್ಕೆ ಇನ್ನೆರಡು ದಿನ ಬಾಕಿ : ವಾಹನ ಪ್ರಚಾರ ಪರ್ಯಟನೆಗೆ ಯಶಸ್ವಿ ಚಾಲನೆ


ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವವು ಏ.17ರಂದು ಆರಂಭವಾಗಲಿದೆ. ನಾಡಿನಾದ್ಯಂತ ಸಂಚರಿಸುವ ವಾಹನ ಪ್ರಚಾರಕ್ಕೆ ಮಂಗಳವಾರ ಶ್ರೀಕ್ಷೇತ್ರದಿಂದ ಚಾಲನೆಯನ್ನು ನೀಡಲಾಯಿತು. ಉದ್ಯಮಿ ಕೊಡುಗೈದಾನಿ ಗೋಪಾಲಕೃಷ್ಣ ಪೈ ಬದಿಯಡ್ಕ ಅವರು ಧ್ವಜ ಹಸ್ತಾಂತರಿಸಿ ಶುಭಕೋರಿದರು. ಅರ್ಚಕ ವೇದಮೂರ್ತಿ ಶಿವರಾಮ ಭಟ್ ಪೆರಡಾಲ ಪ್ರಾರ್ಥನೆಯನ್ನು ಸಲ್ಲಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಜಗನ್ನಾಥ ರೈ ಪೆರಡಾಲ ಗುತ್ತು, ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ, ಕೋಶಾಧಿಕಾರಿ ಸೂರ್ಯನಾರಾಯಣ ಬಿ., ಹಸಿರುವಾಣಿ ಸಮಿತಿಯ ಅಧ್ಯಕ್ಷ ಕೃಷ್ಣಮೂರ್ತಿ ಪುದುಕೋಳಿ, ಪ್ರಚಾರ ಸಮಿತಿಯ ಡಾ. ಶ್ರೀಶಕುಮಾರ ಪಂಜಿತ್ತಡ್ಕ, ಶ್ಯಾಮಪ್ರಸಾದ ಸರಳಿ, ಚಪ್ಪರ ಸಮಿತಿಯ ಅಧ್ಯಕ್ಷ ಭಾಸ್ಕರ ಪಂಜಿತ್ತಡ್ಕ, ಅಲಂಕಾರ ಸಮಿತಿಯ ಸಂಚಾಲಕ ಪುಟ್ಟನಾಯ್ಕ ಪೆರಡಾಲ, ಲೆಕ್ಕ ಪರಿಶೋಧಕ ಕುಞ್ಞಣ್ಣ ಬದಿಯಡ್ಕ, ಶಿವಶಕ್ತಿ ಪೆರಡಾಲ ಸದಸ್ಯರು, ದೇವಸ್ಥಾನದ ಸಿಬ್ಬಂದಿವರ್ಗ, ವಿವಿಧ ಸಮಿತಿಗಳ ಪದಾಧಿಕಾರಿಗಳು, ಭಗವದ್ಭಕ್ತರು ಉಪಸ್ಥಿತರಿದ್ದರು.

Post a Comment

0 Comments