Ticker

6/recent/ticker-posts

Ad Code

ದುಬೈಯ ಬಾಲ ಪ್ರತಿಭೆ ಸಾತ್ವಿ ಶೆಟ್ಟಿ ಸ್ವ ಊರಿನಲ್ಲಿ ರಸ್ತೆ ಅಪಘಾತಕ್ಕೆ ಬಲಿ

 


ಮಂಗಳೂರು : ದುಬೈ ಯುವ ಪ್ರತಿಭೆ ಬಾಲಕಿ ಸಾತ್ವಿ ಶೆಟ್ಟಿ(8) ಕಾಪುವಿನಲ್ಲಿ ನಡೆದ ಅಪಘಾತದಲ್ಲಿ ತೀವ್ರ ಗಾಯಗಳೊಂದಿಗೆ ಸಾವನ್ನಪ್ಪಿರುವ ಘಟನೆ ನಿನ್ನೆ ನಡೆದಿದೆ. ದುಬೈನಲ್ಲಿ ವಾಸವಿದ್ದ ಈ ಕುಟುಂಬವು ಊರಿನಲ್ಲಿಯೇ ನೆಲೆಸುವ ಸಿದ್ದತೆಯಲ್ಲಿತ್ತು. ಸಾತ್ವಿಗಾಗಿ ಉಡುಪಿಯ ಖಾಸಗಿ ಶಾಲೆಯಲ್ಲಿ ಪ್ರವೇಶಾತಿ ಪಡೆದಿದ್ದರು. ಸಾತ್ವಿಯ ತಂದೆ ಇಂದು ನಿತ್ಯಾನಂದ ಶೆಟ್ಟಿಯವರು ದುಬೈಗೆ ತೆರಳುವ ಸಿದ್ಧತೆಯಲ್ಲಿದ್ದರು. ಕಾಪು ಪೇಟೆಯಿಂದ ಸಾಮಾಗ್ರಿ ತರಲು ಹೋಗಿ ವಾಪಸಾಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಸ್ಕೂಟಿ ಸವಾರ ನಿತ್ಯಾನಂದ ಶೆಟ್ಟಿ ಅವರಿಗೂ ಚಿಕ್ಕ ಗಾಯಗಳಾಗಿವೆ.

ಮೃತ ಸಾತ್ವಿ ಶೆಟ್ಟಿ ದುಬೈ ಕನ್ನಡ ಪಾಠ ಶಾಲೆಯ ವಿದ್ಯಾರ್ಥಿನಿಯಾಗಿದ್ದು ದುಬೈನಲ್ಲಿ ನಡೆದ ಕನ್ನಡ ಪರ ಕಾರ್ಯಕ್ರಮದಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ದುಬೈ ತುಳು ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದಳು. ಸಾತ್ವಿ ಶೆಟ್ಟಿ ತನ್ನ  ತಂದೆ ಹಾಗೂ ತಾಯಿ ಶೈಲಜಾ ಶೆಟ್ಟಿ ಮತ್ತು ಸಹೋದರಿಯರನ್ನು ಅಗಲಿದ್ದಾರೆ.

Post a Comment

0 Comments