Ticker

6/recent/ticker-posts

Ad Code

ಕಾಳ್ಯಂಗಾಡು ಬ್ರಹ್ಮಕಲಶೋತ್ಸವ ಶ್ರೀಕೃಷ್ಣ ಗುರೂಜಿ ನೇತೃತ್ವದಲ್ಲಿ ಪ್ರತಿಷ್ಠಾದಿ ಕಾರ್ಯ


 ಕಾಸರಗೋಡು :  ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಕ್ಷೇತ್ರದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗುತ್ತಿದ್ದು ಕ್ಷೇತ್ರದ ತಂತ್ರಿಗಳಾದ ಶ್ರಿ ಕೃಷ್ಣ ಗುರೂಜಿ ಕುಕ್ಕಾಜೆ ಅವರ ನೇತೃತ್ವದಲ್ಲಿ  ಮಂಗಳವಾರ ಪ್ರಾತಃಕಾಲ ಬ್ರಾಹ್ಮಿ ಮುಹೂರ್ತದಲ್ಲಿ ನಾಗರಾಜ ಹಾಗೂ ಪರಿವಾರ ದೈವ ದೇವರುಗಳ ಪ್ರತಿಷ್ಠೆ, ಜೀವಕಲಶಾಭಿಷೇಕ, ಉದಯಪೂಜೆ ಜರಗಿತು. 



ಸಂಜೆ ಶ್ರೀದೇವಿಯ ಬಾಲಾಲಯ ಅನುಜ್ಞಾ ಕಲಶ, ವಾಸ್ತುಹೋಮ, ವಾಸ್ತುಬಲಿ, ರಾಕ್ಷಘ್ನ ಹೋಮ, ಅಧಿವಾಸ ಹೋಮ, ಜಲಾಧಿವಾಸ, ಧ್ಯಾನ್ಯಾಧಿವಾಸ, ಜೀವಕಲಶ ಪೂಜೆ, ಶಯ್ಯಾ ಪೂಜೆ, ಮಹಾಪೂಜೆಗಳು ನಡೆದವು.

ಏ. 29 ಬುಧವಾರ ಬೆಳಿಗ್ಗೆ 5 ಗಂಟೆಗೆ  ಗಣಪತಿ ಹೋಮ, ಪ್ರತಿಷ್ಠಾಂಗ ಹೋಮ, ಶಿಖರ ಪೂಜೆ, ಜೀವ ಕಲಶ ಪೂಜೆ ಬಳಿಕ ಬೆಳಿಗ್ಗೆ ಗಂಟೆ 9.48ರಿಂದ 11.25 ವರೆಗಿನ ಮಿಥುನ ಲಗ್ನ ಸುಮುಹೂರ್ತದಲ್ಲಿ ಶ್ರೀ ದೇವಿಯ ಪ್ರತಿಷ್ಠೆ,ಜೀವಕಲಶಾಭಿಷೇಕ, ಮಹಾಪೂಜೆ, ಮಂಗಳಾರತಿ, ಕವಾಟಬಂಧನ ನಡೆಯಲಿದೆ.

Post a Comment

0 Comments