ತಿರುವನಂತಪುರ : ಕೇರಳ ವಿಧಾನಸಭಾ ಚುನಾವಣೆಯಲ್ಲಿ ಎಡಪಕ್ಷಗಳ ಭದ್ರಕೋಟೆಗಳು ಕುಸಿದಾಗ ಎಡರಂಗದ ಪ್ರಮುಖ ನಾಯಕರು ಸೇರಿದಂತೆ 13 ಸಚಿವರು ಸೋಲಿನ ರುಚಿ ಕಂಡರು.
ಯುಡಿಎಫ್ ಅಲೆಯಲ್ಲಿ ಸೋತ ಸಚಿವರೆಂದರೆ ಆರನ್ಮುಳ ಕ್ಷೇತ್ರದ-ವೀಣಾ ಜಾರ್ಜ್, ಇರಿಂಞಾಲಕುಡದ ಆರ್.ಬಿಂದು, ತ್ರಿತ್ತಾಲದ-ಎಂ.ಬಿ.ರಾಜೇಶ್, ಇಡುಕ್ಕಿಯ ರೋಶಿ ಅಗಸ್ಟಿನ್, ಕಳಮಶ್ಶೇರಿಯ-ಪಿ.ರಾಜೀವ್, ಪತ್ತನಪುರಂನ -ಕೆ.ಬಿ.ಗಣೇಶ್ ಕುಮಾರ್, ಚಡಯಮಂಗಲದ-ಜೆ.ಚಿಂಜು ರಾಣಿ, ಎಲತ್ತೂರಿನ-ಎ.ಕೆ.ಶಶೀದ್ರನ್, ಎಟ್ಟುಮಾನೂರಿನ ವಿ.ಎನ್. ವಾಸವನ್, ಕಣ್ಣೂರು ಕಡನ್ನಪ್ಪಳ್ಳಿ ರಾಮಚಂದ್ರನ್, ತಿರುರ್-ವಿ ಅಬ್ದುರೆಹಮಾನ್, ಮಾನಂದವಾಡಿ-ಒಆರ್ ಕೇಲು, ನೇಮಂ-ವಿ ಶಿವನ್‌ಕುಟ್ಟಿ ಸೋತ ಪ್ರಮುಖ ಸಚಿವರು.

0 Comments