ಕಾಞಂಗಾಡ್ : ಆಟೋರಿಕ್ಷಾ ಮತ್ತು ಬೈಕ್ ಡಿಕ್ಕಿ ಹೊಡೆದ ಅಪಘಾತದಲ್ಲಿ ಬೈಕ್ ಸವಾರಿ ಮಾಡುತ್ತಿದ್ದ ಪಾಲಿಟೆಕ್ನಿಕ್ ವಿದ್ಯಾರ್ಥಿ ದುರಂತ ಸಾವನ್ನಪ್ಪಿದ್ದಾನೆ. ಪಯ್ಯನ್ನೂರು ಕುಂಞಿಮಂಗಲಂ ಮಲ್ಲಿಯೋಟ್ ಮೂಲದ ಕಾಞಂಗಾಡ್ ಪಾಲಿಟೆಕ್ನಿಕ್ ವಿದ್ಯಾರ್ಥಿ ರೋಹಿತ್ (20) ಮೃತಪಟ್ಟಿದ್ದಾನೆ. ರೋಹಿತ್ ಮೆಕ್ಯಾನಿಕಲ್ ವಿಭಾಗದ ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದು, ಆತನ ಜೊತೆಗಿದ್ದ ಅಲೆನ್ (19) ಎಂಬ ವಿದ್ಯಾರ್ಥಿಯನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರ ಸಂಜೆ ಈ ಅಪಘಾತ ಸಂಭವಿಸಿದೆ. ಕುಶಾಲ ನಗರ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಾದ ಇಬ್ಬರೂ ಕಾಲೇಜು ಯೂನಿಯನ್ ವಾರ್ಷಿಕ ಆಚರಣೆಯಲ್ಲಿ ಭಾಗವಹಿಸಿ ತಮ್ಮ ನಿವಾಸಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ.

0 Comments