ಕಾಸರಗೋಡು : ಪೆರ್ಲ ಸಮೀಪದ ಮೊಗೇರು ನಿವಾಸಿ ಶೇಖ್ ಅಲಿ ಅಲಿಯಾಸ್ ಸೆಕಾಲಿ ಅವರ ಮನೆಗೆ ಅತಿಕ್ರಮಣ ಮಾಡಿ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿ ತಲೆಗೆ ಹೊಡೆದು ಕೊಲ್ಲಲು ಪ್ರಯತ್ನಿಸಿದ ಮತ್ತು ಕಲ್ಲು ಎಸೆದು ಮನೆಗೆ ಹಾನಿ ಮಾಡಿದ ಪ್ರಕರಣದಲ್ಲಿ ಆರೋಪಿ ಪೆರ್ಲ ಕಾಟುಕುಕ್ಕೆಯ ಕತ್ತಿ ನೌಶಾದ್ ಯಾನೆ ನವಾಜ್ ಷೆರೀಫ್ ಮತ್ತು ಉಡುಂಬು ನೌಶಾದ್ ಯಾನೆ ಅಬ್ದುಲ್ ನೌಶಾದ್ ಅವರನ್ನು ಕಾಸರಗೋಡು ಸಹಾಯಕ ಸೆಷನ್ಸ್ ನ್ಯಾಯಾಧೀಶೆ ಪ್ರಿಯಾ ಕೆ.ಪಿ ಅವರು ಖುಲಾಸೆಗೊಳಿಸಿದ್ದಾರೆ. ಈ ಘಟನೆ ಡಿಸೆಂಬರ್ 25, 2020 ರಂದು ನಡೆದಿತ್ತು. ಶೇಖ್ ಅಲಿ ಅವರ ದೂರಿನ ಮೇರೆಗೆ ಬದಿಯಡ್ಕ ಠಾಣಾ ಪೊಲೀಸರು ಆರೋಪಿಗಳ ವಿರುದ್ಧ ಮನೆಗಳ್ಳತನ ಮತ್ತು ಕೊಲೆಯತ್ನ ಸೇರಿದಂತೆ ಜಾಮೀನು ರಹಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. 5 ವರ್ಷಗಳ ಸುದೀರ್ಘ ತನಿಖೆ ಮತ್ತು ವಿಚಾರಣೆಯ ನಂತರ ನ್ಯಾಯಾಲಯದ ನಿರ್ಣಾಯಕ ತೀರ್ಪು ಹೊರಬಿದ್ದಿದೆ. ಆರೋಪಿಗಳ ಪರವಾಗಿ ವಕೀಲ ಖಲಂದರ್ ಸಫೀರ್ ಎ. ವಾದಿಸಿದ್ದರು.

0 Comments