ಪೆರ್ಲ: ಕಾಸರಗೋಡು ಸಮೀಪದ ನಾಯಮ್ಮಾರ್ ಮೂಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬೆಳ್ಳೂರು ನಿವಾಸಿ ಮೃತಪಟ್ಟ ಘಟನೆ ನಡೆದಿದೆ. ಬೆಳ್ಳೂರು ಕಲ್ಪಣೆ ನಿವಾಸಿ ವಯರಿಂಗ್ ಕಾರ್ಮಿಕ ವಿಶ್ವನಾಥ(51) ಮೃತಪಟ್ಟ ಯುವಕ. ಇಂದು (ಸೋಮವಾರ) ಅವರು ಚೆಂಗಳ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ವಾರದ ಹಿಂದೆ ನಾಯಮ್ಮಾರ್ ಮೂಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಉಂಟಾಗಿತ್ತು. ವಿಶ್ವನಾಥ ಅವರು ಚಲಾಯಿಸಿದ ಸ್ಕೂಟರಿಗೆ ಪಾಲಕ್ಕಾಡ್ ನಿವಾಸಿಗಳು ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿತ್ತು. ವಿದ್ಯಾನಗರ ಪೊಲೀಸರು ಕೇಸು ದಾಖಲಿಸಿದರು. ಮೃತರು ಮೂಲತಃ ವಾಣಿನಗರ ಸಮೀಪದ ಬೈಲಮೂಲೆ ನಿವಾಸಿಯಾಗಿದ್ದು, ತಂದೆ ದಿವಂಗತ ಚನಿಯ ನಾಯ್ಕ, ತಾಯಿ ಸೀತಾ, ಪತ್ನಿ ಕವಿತಾ, ಮಗ ಆಶ್ವಿಥ್, ಮಗಳು ಅನ್ವಿತ ಎಂಬಿವರನ್ನಗಲಿದ್ದಾರೆ.

0 Comments