ಪೆರ್ಲ: ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ತೆಂಕಬೈಲು ಪ್ರಶಸ್ತಿಯನ್ನು ತೆಂಕುತಿಟ್ಟು ಯಕ್ಷಗಾನದ ಹಿಮ್ಮೇಳ ಗುರು, ಭಾಗವತ ಮೋಹನ ಬೈಪಡಿತ್ತಾಯರಿಗೆ ಪ್ರದಾನಿಸಲಾಯಿತು. ಉಜಿರೆಯ ಓಡಲದ ಬೈಪಾಡಿತ್ತಾಯರ "ಶ್ರೇಯ" ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತ ಮೋಹನ ಬೈಪಾಡಿತ್ತಾಯ, ಪತ್ನಿ ಲಲಿತಾ ಅವರನ್ನು ಗೌರವಿಸಲಾಯಿತು. ಹವ್ಯಾಸಿ ಕಲಾವಿದ ವಿಶ್ವನಾಥ ಕೊಯ್ಯೂರು ಪ್ರಶಸ್ತಿ ಪತ್ರ ವಾಚಿಸಿದರು.
ಪ್ರಶಸ್ತಿಯ ಪ್ರಾಯೋಜಕ, ಭಾಗವತ ಮುರಳಿಕೃಷ್ಣ ಶಾಸ್ತ್ರಿ ತೆಂಕಬೈಲು, ಹಿಮ್ಮೇಳ ಕಲಾವಿದ ಚಂದ್ರಶೇಖರ ಭಟ್ ಕೊಂಕಣಾಜೆ, ಉಪನ್ಯಾಸಕ, ಕಲಾವಿದ ಜಯಪ್ರಕಾಶ ನಾಕೂರು, ಹವ್ಯಾಸಿ ಭಾಗವತ ವೆಂಕಟ್ರಮಣ ರಾವ್ ಬನ್ನೆಂಗಳ, ಉಪನ್ಯಾಸಕ ಪ್ರೊ.ಜಿ.ಪಿ ಹೆಗಡೆ ಮೋಹನ ಬೈಪಡಿತ್ತಾಯರನ್ನು ಅಭಿನಂದಿಸಿ ಮಾತನಾಡಿದರು.
ಪ್ರಶಸ್ತಿ ಸ್ವೀಕರಿಸಿದ ಬೈಪಡಿತ್ತಾಯರು ಭಾಗವತರಾದ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ಜೊತೆಗಿನ ಒಡನಾಟವನ್ನು ಸ್ಮರಿಸಿಕೊಂಡರು. ಪೆರ್ಲದ ಪಡ್ರೆ ಚಂದು ನಾಟ್ಯ ತರಬೇತಿ ಕೇಂದ್ರದ ಅಧ್ಯಕ್ಷರು ನಾಟ್ಯ ಗುರುಗಳಾದ ಸಬ್ಬಣಕೋಡಿ ರಾಮ್ ಭಟ್ ಪ್ರಸ್ತಾಪಿಸಿ ಸ್ವಾಗತಿಸಿದರು. ಯಕ್ಷ ಭಾರತಿ ಕನ್ಯಾಡಿ ಸಂಚಾಲಕ, ಭಾಗವತ ಮಹೇಶ ಕನ್ಯಾಡಿ ವಂದಿಸಿದರು. ಶಿಕ್ಷಕ ಗೋವರ್ಧನ ಎಂ. ಮೂಡಬಿದಿರೆ, ಹಿಮ್ಮೇಳ ಕಲಾವಿದ ನಾರಾಯಣ ಶರ್ಮ ಉಪಸ್ಥಿತರಿದ್ದರು.

0 Comments