Ticker

6/recent/ticker-posts

Ad Code

50 ಲೀಟರ್ ಕಳ್ಳಭಟ್ಟಿಯೊಂದಿಗೆ ಯುವಕನ ಬಂಧನ

ಬದಿಯಡ್ಕ : 50 ಲೀಟರ್ ಕಳ್ಳಭಟ್ಟಿಯೊಂದಿಗೆ  ಯುವಕನೋರ್ವನನ್ನು ಬದಿಯಡ್ಕ ಅಬಕಾರಿ ತಂಡ ಬಂಧಿಸಿದೆ. ಗೋಳಿಯಡ್ಕ ಉನ್ನತಿಯ ಸಂತೋಷ್. ಜಿ.ಕೆ (35) ಬಂಧಿತ ವ್ಯಕ್ತಿ. ರಹಸ್ಯ ಮಾಹಿತಿಯನ್ವಯ ಬದಿಯಡ್ಕ ಅಬಕಾರಿ ನಿರೀಕ್ಷಕ ಜಿಷ್ಣು. ಪಿ.ಆರ್ ನೇತೃತ್ವದಲ್ಲಿ ದಾಳಿ ನಡೆದಿತ್ತು. ಮನೆಯ ಸಮೀಪದ ಪೊದೆಗಳಲ್ಲಿ ಪ್ಲಾಸ್ಟಿಕ್ ಜಾಡಿ ಮತ್ತು ಅಲ್ಯೂಮಿನಿಯಂ ಪಾತ್ರೆಯಲ್ಲಿ ಶೇಖರಿಸಿಟ್ಟಿದ್ದ 50 ಲೀಟರ್ ಕಳ್ಳಭಟ್ಟಿಯನ್ನು ಪತ್ತೆ ಮಾಡಿ ಬಂಧಿಸಲಾಗಿದೆ ಎಂದು ಅಬಕಾರಿ ತಂಡ ತಿಳಿಸಿದೆ. ಸಹಾಯಕ ಅಬಕಾರಿ ನಿರೀಕ್ಷಕ ಕೃಷ್ಣನ್, ಪ್ರಿವೆಂಟಿವ್ ಅಧಿಕಾರಿಗಳಾದ ಸಾಬು. ಕೆ, ಮಂಜುನಾಥ ಆಳ್ವ. ಕೆ, ನಾಗರಿಕ ಅಬಕಾರಿ ಅಧಿಕಾರಿಗಳಾದ ಸದಾನಂದನ್. ಪಿ. ವನಿತಾ ಸಿಇಒ ಧನ್ಯಾ  ಕಾರ್ಯಾಚರಣೆಯಲ್ಲಿ  ಭಾಗಿಯಾಗಿದ್ದರು.

Post a Comment

0 Comments