ಬದಿಯಡ್ಕ : ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನವು ಬ್ರಹ್ಮಕಲಶೋತ್ಸವಕ್ಕೆ ಅಣಿಯಾಗಿದ್ದು ಶ್ರೀ ಕ್ಷೇತ್ರ ಹಾಗೂ ಪರಿಸರವು ಬ್ರಹ್ಮಕಲಶೋತ್ಸವಕ್ಕೆ ಸಿಂಗಾರಗೊಳ್ಳಲಾರಂಭಿಸಿದೆ. ಮುಂದಿನ ಸಿದ್ಧತೆಗಳಿಗೆ ಪೂರ್ವಭಾವಿಯಾಗಿ ಮಾರ್ಚ್ 20 ಶುಕ್ರವಾರ ಬೆಳಗ್ಗೆ 9.36 ರಿಂದ 11ಗಂಟೆಯೊಳಗಿನ ಶುಭವೇಳೆಯಲ್ಲಿ ಚಪ್ಪರ ಮುಹೂರ್ತ ನಡೆಯಲಿದೆ. ಎಡನೀರು ಶಂಕರಾಚಾರ್ಯ ಸಂಸ್ಥಾನಂನ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳು ದಿವ್ಯ ಉಪಸ್ಥಿತರಿದ್ದು ಮುಹೂರ್ತ ನೆರೆವೇರಿಸಲಿದ್ದಾರೆ.

0 Comments