ಪೆರ್ಲ : ಎಣ್ಮಕಜೆ ಪಂಚಾಯತ್ ಕಚೇರಿ ಮತ್ತು ಸಂಬಂಧಿತ ಸಂಸ್ಥೆಗಳ ಬೆಲೆ ಬಾಳುವ ಪೀಠೋಪಕರಣಗಳು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ಹರಾಜು ಪ್ರಕ್ರಿಯೆಯಿಲ್ಲದೆ ಮಾರಾಟಗೈದಿರುವುದನ್ನು ಖಂಡಿಸಿ ಸಿಪಿಐಎಂ ಮತ್ತು ಡಿವೈಎಫ್ ಐ ಎಣ್ಮಕಜೆ ಲೋಕಲ್ ಸಮಿತಿ ನೇತೃತ್ವದಲ್ಲಿ ಪಂಚಾಯತ್ ಕಚೇರಿ ಮುಂಭಾಗ ಪ್ರತಿಭಟನಾ ಮೆರವಣಿಗೆ ನಡೆಯಿತು. ಸಿಪಿಐಎಂ ಎರಿಯಾ ಸಮಿತಿ ಸದಸ್ಯ ನಾಸಿರ್ ಮಲಂಗರೆ ಉದ್ಘಾಟಿಸಿದರು. ಡಿವೈಎಫ್ ಐ ಬ್ಲೋಕ್ ಸಮಿತಿ ಅಧ್ಯಕ್ಷ ಮನೋಜ್ ಮಣಿಯಂಪಾರೆ ಅಧ್ಯಕ್ಷತೆವಹಿಸಿದ್ದರು. ಸಿಪಿಎಂಲೋಕಲ್ ಸಮಿತಿ ಸದಸ್ಯ ರಾಮಕೃಷ್ಣ ರೈ, ಡಿವೈಎಫ್ ಐ ಬ್ಲೋಕ್ ಕಾರ್ಯದರ್ಶಿ ವಿಶ್ವರಾಜ್, ನಾರಾಯಣ ಕಾಟುಕುಕ್ಕೆ ಮೊದಲಾದವರಿದ್ದರು. ಆಡಳಿತ ಕೈಗೊಂಬೆಯಾದ ಪಂಚಾಯತ್ ಕಾರ್ಯದರ್ಶಿ, ಏಕಾಧಿಪತ್ಯದ ಉಪಾಧ್ಯಕ್ಷ ನಿಲುವು ರಾಜಿ ನೀಡಬೇಕೆಂದು ಆಗ್ರಹಿಸಿ ಎಡರಂಗ ಒಕ್ಕೂಟ ನಡೆಸಿದ ಮುನ್ಸೂಚನಾ ಪ್ರತಿಭಟನೆ ಇದಾಗಿದೆ ಎಂದು ಪಕ್ಷ ತಿಳಿಸಿದೆ.

0 Comments