Ticker

6/recent/ticker-posts

Ad Code

ಎಲ್‌ಡಿಎಫ್‌ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಶಾನವಾಸ್ ಪಾದೂರು ರೋಡ್ ಶೋಗೆ ಅಪಾರ ಬೆಂಬಲ ವ್ಯಕ್ತ


ಕಾಸರಗೋಡು: ಕಾಸರಗೋಡು ಕ್ಷೇತ್ರದಲ್ಲಿ ಎಲ್‌ಡಿಎಫ್‌ನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಶಾನವಾಸ್ ಪಾದೂರು ಸ್ಪರ್ಧಿಸುತ್ತಿದ್ದು  ಪೇಟೆಯಲ್ಲಿ ನಡೆದ ರೋಡ್ ಶೋ ಗೆ ಅಪಾರ ಬೆಂಬಲ ವ್ಯಕ್ತವಾಗಿದೆ. ಐಎನ್‌ಎಲ್ ಮತ್ತು ಸಿಪಿಐ(ಎಂ) ನಾಯಕರ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.  ಇದರೊಂದಿಗೆ ಕಾಸರಗೋಡು ಕ್ಷೇತ್ರವು ತ್ರಿಕೋನ ಹೋರಾಟಕ್ಕೆ ಸಜ್ಜಾಗಿದೆ. ಮಂಜೇಶ್ವರ ಕ್ಷೇತ್ರದಲ್ಲಿ ಸಿಪಿಐ(ಎಂ)ನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಶಾನವಾಸ್ ಪಾದೂರು ಸ್ಪರ್ಧಿಸಲಿದ್ದಾರೆ ಎಂದು ಪ್ರಾರಂಭದಲ್ಲಿ ಅಭಿಪ್ರಾಯ ಮೂಡಿ ಬಂದಿತ್ತದರೂ, ನಂತರ, ಜಿಲ್ಲಾ ಕಾರ್ಯದರ್ಶಿ ಸದಸ್ಯ ಕೆ.ಆರ್.ಜಯಾನಂದನ್ ಅವರನ್ನು ಮಂಜೇಶ್ವರದಿಂದ ಅಭ್ಯರ್ಥಿಯಾಗಿ ಘೋಷಿಸಲಾಯಿತು. ಇದರೊಂದಿಗೆ ಶಾನವಾಸ್ ಕಾಸರಗೋಡಿನಿಂದ ಸ್ಪರ್ಧಿಸುವುದು ಖಚಿತವಾಯಿತು. 2020 ರ ಪಂಚಾಯತ್ ಚುನಾವಣೆಯಲ್ಲಿ, ಶಾನವಾಸ್ ಮುಸ್ಲಿಂ ಲೀಗ್‌ನ ಭದ್ರಕೋಟೆಯಾದ ಚೆಂಗಳದಿಂದ ಸ್ಪರ್ಧಿಸಿ ಎಡ ಪಕ್ಷೇತರರಾಗಿ ಹೆಚ್ಚಿನ ಬಹುಮತದಿಂದ ಗೆದ್ದಿದ್ದರು.

Post a Comment

0 Comments