Ticker

6/recent/ticker-posts

Ad Code

ದಾಂಪತ್ಯ ಕಲಹ : ಪತ್ನಿಯ ಇರಿದು ಕೊಲೆಗೈದು ಆತ್ಮಹತ್ಯೆಗೆತ್ನಿಸಿದ ಪತಿ

 

ಪುತ್ತೂರು: ಗಂಡ ಹೆಂಡತಿ ಮಧ್ಯೆ ನಡೆದ ಜಗಳದಲ್ಲಿ ಹೆಂಡತಿ ಕೊಲೆಯಾದ ಘಟನೆ  ವರದಿಯಾಗಿದೆ. ಅರಿಯಡ್ಕ ಗ್ರಾಮದ ಕಟ್ಟತ್ತಾರು ಸಮೀಪದ ಗೋಳ್ತಿಲದಲ್ಲಿ ಮಾ. 20ರಂದು ಬೆಳಿಗ್ಗೆ ದುರ್ಘಟನೆ  ನಡೆದಿದೆ. ಕೊಲೆ ನಡೆಸಿದ  ಬಳಿಕ ಗಂಡ ತನ್ನ ಕತ್ತನ್ನು ತಾನೇ ಕತ್ತಿಯಲ್ಲಿ ಕೊಯ್ದುಕೊಂಡಿದ್ದು, ಆತನ ಸ್ಥಿತಿ ಗಂಭೀರವಾಗಿದೆ. ಆತನನ್ನು ಚಿಕಿತ್ಸೆಗಾಗಿ ಮಂಗಳೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಲೆಯಾದ ಮಹಿಳೆ ಮೂಲತಃ ಕುಮಾರಮಂಗಲದ ಸಾವಿತ್ರಿ(42) ಎಂದು ಗುರುತಿಸಲಾಗಿದ್ದು, ಕೊಲೆ ಮಾಡಿದ ಗಂಡ ಎಮೆಟ್ಟಿ ನಿವಾಸಿ ಪುರುಷೋತ್ತಮ ಯಾನೆ ಭೈರಪ್ಪ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

Post a Comment

0 Comments