ಕಾಸರಗೋಡು : ಜಿಲ್ಲೆಯ ಮುಳಿಯಾರು ಪಂಚಾಯತ್ ನಿವಾಸಿಯಾದ 37 ವರ್ಷದ ಮಹಿಳೆಯ ಮೇಲೆ ಯುವಕನೋರ್ವ ಅತ್ಯಾಚಾರ ನಡೆಸಿರುವುದಾಗಿ ದೂರಲಾಗಿದೆ. ಈ ಸಂಬಂಧ, ಮಯ್ಯಿಲ್ ನ ಕಂದಕೈ ನಿವಾಸಿ ಆಟೋ ಚಾಲಕ ಸುನೀಲ್ ಕುಮಾರ್ ವಿರುದ್ಧ ಮಯ್ಯಿಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸುನೀಲ್ ಕುಮಾರ್ ಅವರ ತಾಯಿಯನ್ನು ನೋಡಿಕೊಳ್ಳಲು ಮಹಿಳೆ ಬಂದಿದ್ದು ಫೆಬ್ರವರಿ 2021 ರಿಂದ ಹಲವು ಬಾರಿ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಮಹಿಳೆ ದೂರು ನೀಡಿದ್ದಾರೆ.

0 Comments