ಕಾಸರಗೋಡು : ವಾಟ್ಸಪ್ ಗ್ರೂಪ್ ಮೂಲಕ ನುಸುಳಿ ಹೊಸ ಆಪ್ ಒಂದನ್ನು ಫಾವರ್ಡ್ ಮಾಡುವ ಮೂಲಕ ಮೊಬೈಲ್ ಹಾಗೂ ಬ್ಯಾಂಕ್ ಖಾತೆಯನ್ನು ನಿಷ್ಕ್ರಿಯಗೊಳಿಸುವ ಜಾಲವೊಂದು ಕಾಸರಗೋಡಿನ ಹಲವು ವಾಟ್ಸಪ್ ಗ್ರೂಪ್ ಗಳಲ್ಲಿ ಸಕ್ರಿಯವಾಗಿರುವುದಾಗಿ ಬಳಕೆದಾರರು ದೂರಿದ್ದಾರೆ. ವಾಟ್ಸಪ್ ಗ್ರೂಪ್ ನಲ್ಲಿ ಆರ್ ಟಿ ಒ ಚಲನ್ ಎಂಬ ನಂಬರ್ ಮೂಲಕ ಕಾಣಿಸಿಕೊಳ್ಳುವ ಈ ಮೇಸೆಜ್ ಕೈ ತಪ್ಪಿ ಓಪನ್ ಮಾಡಿದರೆ ಮೊಬೈಲ್ ಹ್ಯಾಕ್ ಆಗುವ ಸಂಭವವಿದ್ದು ಅಮಾಯಕರು ಹಲವರು ತಿಳಿಯದೆ ಈ ಆ್ಯಪ್ ನ್ನು ಡೌನ್ ಲೋಡ್ ಮಾಡಿ ಸೋತಿರುವುದಾಗಿ ದೂರುಗಳಿವೆ. ಯಾವುದೇ ಉದ್ದೇಶವಿಲ್ಲದೆ ಬಂದಂತಹ ಈ ಆ್ಯಪ್ ಓಪನ್ ಮಾಡಿ ಹಲವರು ಸಂಕಷ್ಟಕ್ಕೊಳಗಾಗಿರುವುದಾಗಿ ತಿಳಿಸಿದ್ದು, ಈ ಆ್ಯಪ್ ನ್ನು ಯಾರೂ ಡೌನ್ಲೋಡ್ ಮಾಡಬಾರದಾಗಿ ಎಚ್ಚರಿಸಿದ್ದಾರೆ.

0 Comments