ಪೆರ್ಲ : ಎಣ್ಮಕಜೆ ಗ್ರಾಮಪಂಚಾಯತ್ ವ್ಯಾಪ್ತಿಗೆ ಒಳಪಡುವ ಸಾರ್ವಜನಿಕ ವಸ್ತಿಗಳನ್ನು ಹರಾಜು ನಡೆಸದೆ ಅಥವಾ ಆಡಳಿತ ಸಮಿತಿಯ ನಿರ್ಧಾರ ತೆಗೆದುಕೊಳ್ಳದೆ ಅಕ್ರಮವಾಗಿ ಕಚೇರಿಯಿಂದ ಸಾಗಿಸಲಾಗಿದೆ ಎಂದು ಸಿ ಪಿ ಐ (ಯಂ ) ಎಣ್ಮಕಜೆ ಲೋಕಲ್ ಕಮಿಟಿ ದೂರಿದೆ .
ಪಂಚಾಯತ್ ಕಚೇರಿ ಹಾಗೂ ಪಂಚಾಯತ್ ಕಚೇರಿಯ ಅಧೀನದಲ್ಲಿರುವ ಇತರ ಸಂಸ್ಥೆಗಳ ಬೆಲೆಬಾಳುವ ಪಿಠೋಪಕರಣಗಳು ,ಇಲೆಕ್ಟ್ರಾನಿಕ್ ಉಪಕರಣಗಳು ಮತ್ತು ಕಬ್ಬಿಣದ ಸಾಮಗ್ರಿಗಳನ್ನು ನಿಯಮ ವಿರುದ್ಧವಾಗಿ ಸಾಗಿಸಲಾಗಿದೆ
ಪಂಚಾಯತಿನ ಹರಿತ ಕರ್ಮ ಸೇನಾ ಪಿಕಪ್ ವಾಹನದಲ್ಲಿಯೂ , KA21C 2840 ವಾಹನದಲ್ಲಿಯೂ ಸಾಗಿಸಲಾಗಿತ್ತು .ಈ ಪೀಠೋಪಕರಣಗಳಲ್ಲಿ ಕೆಲವನ್ನು ಮುಂಡಿತ್ತಡ್ಕ ಪಳ್ಳಂನಲ್ಲಿರುವ ಪೀಠೋಪಕರಣ ಅಂಗಡಿಗೆ ನೀಡಲಾಗಿತ್ತು ಎಂಬುದು ಸ್ಪಷ್ಟವಾಗಿದೆ . ಸ್ಥಳೀಯರು ಈ ವಿಷಯವನ್ನು ಕಾರ್ಯದರ್ಶಿಯ ಗಮನಕ್ಕೆ ತಂದರು ಅವರು ದೂರು ದಾಖಲಿಸಲು ತಯಾರಾಗಲಿಲ್ಲ . ಸಿ ಪಿ ಯಂ ಎಣ್ಮಕಜೆ ಸ್ಥಳೀಯ ಕಾರ್ಯದರ್ಶಿ ವಿ ವಿನೋದ್ ಅವರು ಸಾರ್ವಜನಿಕ ಅಸ್ಥಿಯನ್ನು ದುರುಪಯೋಗ ಪಡಿಸಿಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಒತ್ತಾಯಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಪಂಚಾಯತ್ ಆಸ್ತಿ ನೋಂದಣಿಯಲ್ಲಿ ಒಳಗೊಂಡ ಪಂಚಾಯತ್ ನ ಅಸ್ತಿಗಳು ನಷ್ಠಗೊಂಡಗ ಪೊಲೀಸ್ ಗೆ ದೂರು ನೀಡದ ಕಾರ್ಯದರ್ಶಿಯವರ ನಿಲುವು ಭ್ರಷ್ಟಾಚಾರಕ್ಕೆ ಒತ್ತಾಸೆ ನೀಡಿದಂತಾಗಿದೆ .
ಇದನ್ನೆಲ್ಲ ಸಂರಕ್ಷಣೆ ಮಾಡಬೇಕಾದ ಕಾರ್ಯದರ್ಶಿ ಇದಕ್ಕೆ ತಯಾರಾಗದೆ ಭ್ರಷ್ಟಾಚಾರ ಮಾಡುವವರ ಪರವಾಗಿ ಅನುಕೂಲಕರವಾಗಿ ನಿಲ್ಲುವುದು ನಿಯಮ ವಿರುದ್ಧವಾಗಿದೆ . ಇದನ್ನು ಕೊಂಡೊಯ್ದವರಿಗೂ ಇದಕ್ಕೆ ಅನುಕೂಲಕರವಾಗಿ ಬೆಂಬಲ ನೀಡಿದ ಉದ್ಯೋಗಸ್ಥರಿಗೆ ಎದುರಾಗಿ ಕ್ರಮ ಕೈಗೊಳ್ಳಬೇಕಾಗಿ ಪಂಚಾಯತ್ ಜೊಯಿಂಟ್ ಡೈರೆಕ್ಟರ್ ಅವರಿಗೆ ದೂರು ನೀಡಲಾಗಿದೆ .ಪಂಚಾಯತ್ ನಲ್ಲಿ ನಡೆಯುವ ಈ ರೀತಿಯ ಎಲ್ಲಾ ಭ್ರಷ್ಟಾಚಾರಕ್ಕೂ ಇಲ್ಲಿಯ ಪಂಚಾಯತ್ ನ ಬಿ ಜೆ ಪಿ ಸದಸ್ಯರ ಪೂರ್ಣ ಸಹಭಾಗಿತ್ವ ಇರುವುದು ವ್ಯಕ್ತವಾಗುತ್ತದೆ. ಇದರ ಮೊದಲು ಪಂಚಾಯತ್ ನ ಸುತ್ತ ಮುತ್ತ ಇರುವ ಮರಗಳನ್ನು ಕಡಿದು ಈ ರೀತಿ ಕೊಂಡೊಯ್ಯಲಾಗಿತ್ತು .

0 Comments