Ticker

6/recent/ticker-posts

Ad Code

ಎನ್ ಡಿ ಎ ಅಭ್ಯರ್ಥಿಯಾಗಿ ಮಂಜೇಶ್ವರದಿಂದ ಕೆ. ಸುರೇಂದ್ರನ್ ನಾಮಪತ್ರ ಸಲ್ಲಿಕೆ

 

ಮಂಜೇಶ್ವರ : ಮಂಜೇಶ್ವರ ವಿಧಾನಸಭಾ ಕ್ಷೇತ್ರದ. ಎನ್ ಡಿ ಎ ಅಭ್ಯರ್ಥಿಯಾಗಿ ಕೆ. ಸುರೇಂದ್ರನ್ ನಾಮಪತ್ರ ಸಲ್ಲಿಸಿದರು. ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷರು ಹಿರಿಯ ನಾಯಕರೊಂದಿಗೆ ಮಂಜೇಶ್ವರ ಎ.ಆರ್.ಒ ಮುಂದೆ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಿದ ಬಳಿಕ ಸುದ್ಧಿಗಾರರೊಡನೆ ಮಾತನಾಡಿದ  ಕೆ. ಸುರೇಂದ್ರನ್, ಮಂಜೇಶ್ವರದಲ್ಲಿರುವ ಭಾಷಾ ಅಲ್ಪಸಂಖ್ಯಾತರನ್ನು ರಾಜ್ಯ ಸರ್ಕಾರದ ಆಡಳಿತವು ಮೂರನೇ ದರ್ಜೆಯ ನಾಗರಿಕರಂತೆ ಪರಿಗಣಿಸುತ್ತಿದೆ ಎಂದು ಹೇಳಿದರು. ಭಾಷಾ ಅಲ್ಪಸಂಖ್ಯಾತರಿಗೆ ಕನ್ನಡದಲ್ಲಿ ಮತದಾರರ ಪಟ್ಟಿಯೂ ಸಿಗುವುದಿಲ್ಲ. ಅವರಿಗೆ ಪಿಎಸ್‌ಸಿ ಪರೀಕ್ಷೆ ಬರೆಯಲು ಸಹ ಸಾಧ್ಯವಾಗುತ್ತಿಲ್ಲ. ಮಂಜೇಶ್ವರ ತಾಲೂಕು ಕಚೇರಿಯ ಶೋಚನೀಯ ಸ್ಥಿತಿಯನ್ನು ನೋಡಿದರೆ ಕ್ಷೇತ್ರದ ನಿರ್ಲಕ್ಷ್ಯದ ಬಗ್ಗೆ ಅರ್ಥವಾಗುತ್ತದೆ. ರಾಜ್ಯದಲ್ಲಿ ಬೇರೆಲ್ಲಿಯೂ ಇಂತಹ ಶೋಚನೀಯ ತಾಲೂಕು ಕಚೇರಿ ಇಲ್ಲ. ಮಹಿಳೆಯರು ಸೇರಿದಂತೆ 60 ಜನರು ಕೆಲಸ ಮಾಡುವ ಇಲ್ಲಿ ಮೂಲಭೂತ ಸೌಕರ್ಯಗಳಿಲ್ಲದಿರುವುದೇ ರಾಜ್ಯಾಡಳಿತಕ್ಕೆ ನಾಚಿಕೆಗೇಡುತನ. ಈ ಕಾರಣದಿಂದಲೇ  ಎಡರಂಗದ ಅಭ್ಯರ್ಥಿ  ಈ ಕಚೇರಿಯನ್ನು ನೋಡದಂತೆ ಇಲ್ಲಿಗೆ ನಾಮಪತ್ರ ಸಲ್ಲಿಸಲು ಬರುವ ಬದಲು ಜಿಲ್ಲಾಧಿಕಾರಿ ಕಚೇರಿಗೆ ಹೋಗಿರುವುದು ಹಾಸ್ಯಸ್ಪದ ಎಂದು ಸುರೇಂದ್ರನ್ ಆರೋಪಿಸಿದರು. ಶಾಸಕ ಭರತ್ ಶೆಟ್ಟಿ, ಹಿರಿಯ ನಾಯಕರಾದ ಕೆ.ವಿ. ಭಟ್, ಸುರೇಶ್ ಕುಮಾರ್ ಶೆಟ್ಟಿ, ಗೋಪಾಲ್ ಶೆಟ್ಟಿ ಅರಬೈಲು, ಎ.ಕೆ. ಕಯ್ಯಾರ್, ವಿ. ರವೀಂದ್ರನ್, ಜಯಂತ ಪಾಟಾಳಿ, ಕುಂಬಳೆ ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ,  ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್  ಮಂಜೇಶ್ವರ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Post a Comment

0 Comments