ನೀರ್ಚಾಲು : ಬೇಳ ಮತ್ತು ಪರಿಸರ ಪ್ರದೇಶಗಳಲ್ಲಿ ಬೀದಿ ನಾಯಿಗಳ ಹಾವಳಿ ವ್ಯಾಪಕವಾಗಿದೆ. ಈ ನಡುವೆ ನಾಲ್ಕು ವರ್ಷದ ಬಾಲಕನೋರ್ವನಿಗೆ ಬೀದಿ ನಾಯಿ ಕಚ್ಚಿದ ಬಗ್ಗೆ ವರದಿಯಾಗಿದೆ. ಬೇಳ ವಿ.ಎಂ. ನಗರದ ನಾರಾಯಣನ್ ಅವರ ಮಗ ಪ್ರಣವ್ ಎಂಬ ಬಾಲಕನಿಗೆ ನಾಯಿ ಕಚ್ಚಿದೆ. ಇಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮಾನ್ಯದ ಎಲ್.ಕೆ.ಜಿ. ಶಾಲೆಗೆ ಹೋಗಲು ಆಟೋ ರಿಕ್ಷಾ ಹತ್ತುತ್ತಿದ್ದಾಗ ಹಿಂದಿನಿಂದ ನಾಯಿ ದಾಳಿ ಮಾಡಿದೆ. ನಾಯಿ ಕಡಿತಕ್ಕೊಳಗಾದ ಮಗುವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೇಳ, ಕಡಂಬಳ ಶಾಲಾ ಆವರಣ, ಏಣಿಯಾರ್ಪು, ಪುದುಕ್ಕೋಳಿ, ಬದಿಯಡ್ಕ ನಗರ ಮತ್ತು ನೀರ್ಚಾಲು ಮೇಲಿನ ಬಸ್ ನಿಲ್ದಾಣ ಪ್ರದೇಶದಂತಹ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಬೀದಿ ನಾಯಿಗಳು ಜನರು ಮತ್ತು ಸಾಕುಪ್ರಾಣಿಗಳಿಗೆ ಅಪಾಯವನ್ನುಂಟುಮಾಡುತ್ತವೆ. ಬೀದಿ ನಾಯಿಗಳಿಂದ ಹೆಚ್ಚುತ್ತಿರುವ ಉಪದ್ರವದ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

0 Comments